

ರಾಯಚೂರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ಫ್ ತಿದ್ದುಪಡಿ ಕಾನೂನು-2025ರ ವಿರುದ್ಧ ಕರೆ ನೀಡಿದ ಹಿನ್ನಲೆಯಲ್ಲಿ ಶುಕ್ರವಾರ ಪ್ರಾರ್ಥನೆಯ ನಂತರ ನಗರದ ಎಲ್ಲಾ ಮಸ್ಜೀದ್‌ಗಳ ಮುಂದೆ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಸರ್ಕಾರದ ವಕ್ಪ್ ಆಸ್ತಿಗಳನ್ನು ರಕ್ಷಣೆ ಮಾಡುವ ಬದಲಾಗಿ ಅಕ್ರಮ ಒತ್ತುವರಿದಾರರ ಪರವಾಗಿ ಕಾನೂನು ತಿದ್ದುಪಡಿ ಮಾಡಿರುವದನ್ನು ವಿರೋಧಿಸಿ ದೇಶದ ಎಲ್ಲಾ ಭಾಗಗಳಲ್ಲಿ ವಿವಿದ ಹಂತದಲ್ಲಿ ಸದರಿ ಕಾನೂನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿದ್ದು ಖಂಡನೀಯಾವಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ನಡೆಸುತ್ತಿದೆ, ಸುಪ್ರೀಂಕೋರ್ಟ್ ನಲ್ಲಿದಾವೆ ಹಾಕಲಾಗಿದೆ, ಸುಪ್ರೀಂ ಕೋರ್ಟ್ ಸರ್ಕಾರ ತಿದ್ದುಪಡಿ ಮಾಡಲಾದ ಅಂಶಗಳಲ್ಲಿ ಮೂರು ಅಂಶಗಳ ಜಾರಿಗೆ ತಡೆಯಾಜ್ಞೆ ನೀಡಿದೆ. ಇನ್ನುಳಿದ ಅಂಶಗಳ ಕುರಿತು ಚರ್ಚೆ ನಡೆಯುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ-2025 ಜಾರಿಯ ನಂತರ ದೇಶದಲ್ಲಿ ವಕ್ಪ್ ಆಸ್ತಿಗಳ ರಕ್ಷಣೆ ಕಷ್ಟವಾಗುತ್ತದೆ, ಕೇಂದ್ರ ಸರ್ಕಾರ ವಕ್ಫ್ ಆಸ್ತಿಗಳನ್ನು ಬಳಸಿ ಅರಾಜಕತೆ ಸೃಷ್ಟಿ ಗೆ ದಾರಿ ಮಾಡಿಕೊಡಲು ಮುಂದಾಗಿರುವುದು ದುರದೃಷ್ಟಕರವೆಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆಸೀಮುದ್ದೀನ ಅಕ್ತರ್, ಡಾ.ರಝಾಕ ಉಸ್ತಾದ, ಮೊಹಮ್ಮದ ಉಸ್ಮಾನ, ಏಜಾಜ್ ಅಲಿ, ಸೈಯದ ಅಮೀನುಲ್ ಹಸನ್, ಅಕ್ತರ್ ಹುಸೇನ, ಶೆಖ್ ಮಾಸೂಮ್, ಮೌಲಾನಾ ಜಮೀಲ್ ಸಿರಾಜಿ, ಜಹೀರುದ್ದೀನ ಸೇರಿದಂತೆ ಅನೇಕರು ಇದ್ದರು.