

ರಾಣೆಬೆನ್ನೂರ: ಮುಸ್ಲಿಂ ಸಮಾಜದವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಕ್ಲಿನಿಕ್ಗೆ ನುಗ್ಗಿದ ನೂರಾರು ಮುಸ್ಲಿಂ ಯುವಕರು ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಟನೆ ನಗರದ ಕೋಟೆ ಓಣಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಹರ ಪೊಲೀಸ್ ಠಾಣೆಯಲ್ಲಿ ದೂರು&ಪ್ರತಿದೂರು ದಾಖಲಾಗಿದೆ.
ಇಲ್ಲಿಯ ರಾಜೇಶ್ವರಿ ನಗರದ ನಿವಾಸಿ ಡಾ. ಗುರುಮೂರ್ತಯ್ಯ ಗಂಗಾಧರಯ್ಯ ರಾಚೋಟಿಮಠ (46) ಎಂಬುವರ ಮೇಲೆ ಹಲ್ಲೆ ನಡೆಸಿರುವುದು. ಈ ಪ್ರಕರಣಕ್ಕೆ ಸಂಬಂಧಿಸಿ ಮಕ್ಸೂದ್ ಮೊಮೀನ್, ಸೈಯದ್ ಅಹ್ಮದ್ ಮಕಾಂದಾರ, ಸೈಯದ್ ಹೊನ್ನಾಳಿ, ಜಾರಸಾಧೀಕ್ ಕಿಲ್ಲೇದಾರ, ಅಬ್ದುಲ್ ಮೊನಾಪ್ ಮೊಮೀನ್ ಸೇರಿ 20ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ಡಾ. ಗುರುಮೂರ್ತಯ್ಯನ ಕ್ಲಿನಿಕ್ಗೆ ನುಗ್ಗಿ ಇಸ್ಲಾಂ ಧರ್ಮದ ಬಗ್ಗೆ ಅಗೌರವವಾಗಿ ಮಾತನಾಡಿದ್ದಾನೆ ಎಂದು ಆರೋಪಿ ಮನಸ್ಸೋಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೆ ವೈದ್ಯನ ಕ್ಲಿನಿಕ್ ಎದುರು ನಿಲ್ಲಿಸಿದ್ದ ಇಲೆಕ್ಟ್ರಿಕಲ್ ಬೈಕ್ ಎತ್ತಿ ಬಿಸಾಕಿದ್ದು ಅದು ಕೂಡ ಬೆಂಕಿ ಹತ್ತಿ ಉರಿದಿದೆ. ಕೂಡಲೇ ಟನಾ ಸ್ಥಳಕ್ಕೆ ಬಂದ ಶಹರ ಠಾಣೆ ಪೊಲೀಸರು ವೈದ್ಯನನ್ನು ರಕ್ಷಣೆ ಮಾಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆತಂದಿದ್ದಾರೆ.
ವೈದ್ಯನ ವಿರುದ್ಧ ಮಹ್ಮದಜಾರ್ ಖಲೀಲಅಹ್ಮದ್ ಮೊಮೀನ್ (37) ಎಂಬುವನು ಪ್ರತಿದೂರು ನೀಡಿದ್ದಾನೆ. ನನ್ನ ಅಕ್ಕನ ಮಗನನ್ನು ವೈದ್ಯನ ಬಳಿ ತೋರಿಸಲು ಹೋದಾಗ "ನಮ್ಮ ಸಂಬಂಧಿಕರಿಗೆ ಪಹಲ್ಗಾಮ್ನಲ್ಲಿ ಮುಸ್ಮಿಮರು ಹೊಡೆದಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುತ್ತಾರೆ' ಎಂಬುದು ಸೇರಿ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ' ಎಂದು ದೂರಿನಲ್ಲಿ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.