ಭಯೋತ್ಪಾದಕ ದಾಳಿ ಖಂಡಿಸಿ ಮುಸ್ಲೀಮರ ಪ್ರತಿಭಟನೆ

muslim
Published on

ಕುಶಾಲನಗರ:

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಕುಶಾಲನಗರ ತಾಲೂಕು ವ್ಯಾಪ್ತಿಯ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಜಾಮಿಯ ಮಸೀದಿ ಅಧ್ಯಕ್ಷ ಮಹಮ್ಮದ್ ಭಯೋತ್ಪಾದನಾ ದಾಳಿ ಹೆಸರಿನಲ್ಲಿ ನಡೆಯುತ್ತಿರುವ ದುಷ್ಕೃತ್ಯದ ಬಗ್ಗೆ ಮುಸ್ಲಿಮರ ವಿರೋಧವಿದೆ.

ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ಒಂದೇ ಎಂಬ ಭಾವನೆಯಲ್ಲಿ ನಾವು ಬದುಕುತ್ತಿದ್ದೇವೆ. ಈ ದೇಶದ ಕೊನೆಯ ನಾಗರಿಕರಿಗೆ ತೊಂದರೆಯಾದರೂ ಮುಸ್ಲಿಂ ಸಂಘಟನೆ ನ್ಯಾಯದ ಪರ ಇರುತ್ತದೆ ಎಂದರು. ಎಸ್‌ಡಿಪಿಐ ನಗರಾಧ್ಯಕ್ಷರಾದ ಜಕ್ರಿಯ ಮಾತನಾಡಿ ಧರ್ಮ ಭೇದ ಭಾಷೆ ಮರೆತು ಈ ಭಯೋತ್ಪಾದಕರ ದಾಳಿಯ ವಿರುದ್ಧ ಹೋರಾಡುವ ಅವಶ್ಯಕತೆ ಇದೆ.

ಸಹೋದರ ಸಹೋದರಿಯರ ಹತ್ಯೆ ಮಾಡಿದ ಆರೋಪಿಗಳಿಗೆ ಭಾರತದಲ್ಲಿ ಗಲ್ಲು ಶಿಕ್ಷೆಗಿಂತ ಹೆಚ್ಚಿನ ಶಿಕ್ಷೆ ಇದ್ದಲ್ಲಿ ಅವರ ಶವ ಸಂಸ್ಕಾರಕ್ಕೂ ಸಿಗದಂತಹ ಶಿಕ್ಷೆ ಇದ್ದರೆ ಅದನ್ನ ಜಾರಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಭಾರತದಲ್ಲಿ ಕಾಶ್ಮೀರದಂಥ ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳಿದಾಗ ಅವರ ರಕ್ಷಣೆಯ ಬಗ್ಗೆ, ಭಯೋತ್ಪಾದಕರ ಇಂಥ ದಾಳಿ ವಿರುದ್ಧ ಎಚ್ಚರಿಕೆ ತೆಗೆದುಕೊಳ್ಳಬೇಕು. ಭಾರತದ ಪ್ರತಿಯೊಬ್ಬ ಪ್ರಜೆಯೂ ಹೋರಾಟ ಮಾಡಿ ದೇಶದಲ್ಲಿ ಇನ್ನು ಮುಂದೆ ಇಂಥ ಕೃತ್ಯಗಳು ನಡೆಯದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಸ್ಲಿಮರು ಪ್ರಾರ್ಥನೆಯ ನಂತರ ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಮುಬೀನ್, ಪ್ರಧಾನ ಕಾರ್ಯದರ್ಶಿ ರಫೀಕ್, ದಂಡಿನಪೇಟೆ ನೂರ್ ಮಸೀದಿ ಅಧ್ಯಕ್ಷ ಬಷೀರ್, ಪ್ರಧಾನ ಕಾರ್ಯದರ್ಶಿ ಇರ್ಫಾನ್, ಜನತಾ ಕಾಲೋನಿ ಬಿಲಾಲ್ ಮಸೀದಿ ಅಧ್ಯಕ್ಷ ಮುಜೀಬ್, ಪ್ರಧಾನ ಕಾರ್ಯದರ್ಶಿ ಮಜೀದ್, ಹಿಲಾಲ್ ಮಸೀದಿ ಅಧ್ಯಕ್ಷ ಪಾಷ, ತಾಲ್ಲೂಕು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹನೀಫ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net