ಅಶೋಕ ಶಿಲಾಸನದ ನಾಮಫಲಕ ನಾಪತ್ತೆ

30012022 Maski boar no
Published on

ಮಸ್ಕಿ: ಪಟ್ಟಣದ ಅಶೋಕ ವೃತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಳವಡಿಸಲಾಗಿದ್ದ ಸಾಮ್ರಾಟ್ ಅಶೋಕ ಶಿಲಾಶಾಸನದ ನಾಮಫಲಕ ರಾತ್ರೋ ರಾತ್ರಿ ನಾಪತ್ತೆಯಾಗಿದೆ. ಶಿಲಾಶಾಸನದ ನಾಮಫಲಕ ಹಲವಾರು ವರ್ಷಗಳಿಂದ ಇದ್ದು, ಶಾಸನ ಸ್ಥಳ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗಿತ್ತು. ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ನಾಮಫಲಕ ಶಿಥಿಲಗೊಂಡಿತ್ತು. ಹಲವು ತಿಂಗಳ ಹಿಂದೆಯೇ ನಾಮಫಲಕ ತೆಗೆದು ಹಾಕಲು ಯತ್ನ ನಡೆದಿದ್ದು, ಸ್ಥಳೀಯರ ವಿರೋಧದಿಂದಾಗಿ ತೆರವು ಕೈ ಬಿಡಲಾಗಿತ್ತು. ಗುರುವಾರ ರಾತ್ರೋ ರಾತ್ರಿ ನಾಮಫಲಕವನ್ನು ತೆರವು ಮಾಡಲಾಗಿದೆ. ಈ ಕುರಿತು ಸ್ಥಳೀಯರು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾಮಫಲಕವನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net