ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

Untitled design
ಮಸ್ಕಿ ಜಲಾಶಯಕ್ಕೆ ಮಂಗಳವಾರ ರಾತ್ರಿ 16 ಅಡಿ ನೀರು ಹರಿದು ಬಂದಿರುವುದು.
Published on

ಮಸ್ಕಿ: ಕಳೆದ ಎರಡು ದಿನಗಳಿಂದ ರಾತ್ರಿ ಮತ್ತು ಹಗಲಿನಲ್ಲಿ ಸುರಿದ ಮಳೆಯಿಂದಾಗಿ ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಡ್ಯಾಂ ಭರ್ತಿಯಾಗಲು ಕೆಲ ಅಡಿಗಳಷ್ಟು ಮಾತ್ರ ಬಾಕಿ ಇದೆ.

ಭರ್ತಿಗೆ 16 ಅಡಿ ಬಾಕಿ

0.5 ಟಿಎಂಸಿ (29 ಅಡಿ) ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ಸತತ ಸುರಿದ ಮಳೆಗೆ 16 ಅಡಿ ನೀರು ಹರಿದು ಬಂದಿದೆ. ಭರ್ತಿಯಾಗಲು ಇನ್ನು 13 ಅಡಿ ಬಾಕಿ ಇದ್ದು, ಜಲಾಶಯದ ಮೇಲ್ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಯಾವ ಕ್ಷಣದಲ್ಲಾದರೂ ಜಲಾಶಯ ಭರ್ತಿಯಾಗಬಹುದು.

ಜಲಾಶಯ ಭರ್ತಿಯಾದರೆ ಹೆಚ್ಚುವರಿ ನೀರನ್ನು ಮಸ್ಕಿಯ ಹಿರೇಹಳ್ಳಕ್ಕೆ ಬಿಡಲಾಗುವುದು. ಸತತವಾಗಿ ಮಳೆ ಸುರಿಯುತ್ತಿರುವದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ನೀರನ್ನು ಹಳ್ಳಕ್ಕೆ ಹರಿ ಬಿಡಲಾಗುತ್ತದೆ. ಗ್ರಾಮಸ್ಥರು ಮುನ್ನಚ್ಚರಿಕೆಯಾಗಿ ಜಾನುವಾರುಗಳನ್ನು ಹಳ್ಳಕ್ಕೆ ಬಿಡಬಾರದು ಎಂದು ಮಸ್ಕಿ ನಾಲಾ ಜಲಾಶಯದ ಸಹಾಯಕ ಇಂಜಿನಿಯರ್ ದಾವುದ್ ತಿಳಿಸಿದರು.
ಸತತ ಮಳೆ ರೈತರು ಮೊಗದಲ್ಲಿ ಖುಷಿ ಃ ಮಳೆ ಬಾರದೆ ಬಿತ್ತಿದ ಬೆಳೆಗಳೆಲ್ಲ ಒಣಗುವ ಸ್ಥಿತಿ ನಿರ್ಮಾಣವಾಗಿತ್ತು. ಸತತ ಮಳೆ ಬಂದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತೊಗರಿ ಮತ್ತು ಸಜ್ಜೆ ಬೆಳೆಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net