ಚಾಲಕರ ಮುನ್ನೆಚ್ಚರಿಕೆ ವಹಿಸಲಿ

Untitled design (1)
ಮಸ್ಕಿ ಭ್ರಮರಾಂಬ ಸಹಕಾರಿ ಸಂಸ್ಥೆಯಲ್ಲಿ ವಾಹನ ಚಾಲಕರ ಕೈಪಿಡಿ ಪುಸ್ತಕವನ್ನು ಡಾ.ಶಿವಶರಣಪ್ಪ ಇತ್ಲಿ ಬಿಡುಗಡೆಗೊಳಿಸಿದರು. ಪ್ರಮುಖರಾದ ಪಂಪಣ್ಣ ಗುಂಡಳ್ಳಿ, ತಾರನಾಥ, ವೀರೇಶ ಹಿರೇಮಠ, ವಿಘ್ಙೇಶಗೌಡ, ಎಎಸ್‌ಐ ಹುಲುಗಪ್ಪ ಇದ್ದರು.
Published on

ಮಸ್ಕಿ: ವಾಹನ ಚಾಲಕರು ರಸ್ತೆ ಬದಿಯ ಸೂಚನ ಫಲಕಗಳ ನಿರ್ದೇಶನಗಳನ್ನು ಪಾಲಿಸಬೇಕು. ಅವುಗಳಿಗೆ ಜೀವ ಇಲ್ಲ. ಆದರೆ ಜೀವ ಉಳಿಸುವ ಶಕ್ತಿ ಇದೆ ಎಂದು ರಾಯಚೂರಿನ ವಾಹನ ಚಾಲಕರ ತರಬೇತುದಾರ ತಾರನಾಥ ಹೇಳಿದರು.

ಪಟ್ಟಣದ ಭ್ರಮರಾಂಬ ಸಹಕಾರಿ ಸಂಸ್ಥೆಯಲ್ಲಿ ಗುರುವಾರ ವಾಹನ ಚಾಲಕರ ಕೈಪಿಡಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ವಾಹನ ಚಾಲಕರಿಗೆ ಬಹುದೊಡ್ಡ ಜವಾಬ್ದಾರಿ ಇದೆ. ಚಾಲಕರ ಪ್ರಾಣದ ಜತೆಗೆ ಪ್ರಯಾಣಿಕರ ಪ್ರಾಣವು ಮುಖ್ಯವಾಗಿದ್ದು ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದರು.

ಭ್ರಮರಾಂಬ ಸಹಕಾರಿ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಚಾಲಕರ ಕೈಪಿಡಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪ್ರಧಾನ ವ್ಯವಸ್ಥಾಪಕ ವೀರೇಶ ಹಿರೇಮಠ ಮತ್ತು ವಿಘ್ಙೇಶಗೌಡ ಮಾತನಾಡಿದರು. ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಎಎಸ್‌ಐ ಹುಲುಗಪ್ಪ, ಮಸ್ಕಿ ಪಟ್ಟಣದ ವಾಹನ ಚಾಲಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net