ಕೊನೆಗೂ ಸೆರೆ ಸಿಕ್ಕಿತು ಮಸ್ಕಿಯಲ್ಲಿ 15 ಜನರನ್ನು ಗಾಯಗೊಳಿಸಿದ್ದ ಹುಚ್ಚು ಕೋತಿ!

23062021 Maski Monkey capture
Published on

ಅರಣ್ಯಕ್ಕೆ ರವಾನೆ

ಮಸ್ಕಿ: ಕಳೆದ ಮೂರ್ನಾಲ್ಕು ದಿನಗಳಲ್ಲಿ ಪಟ್ಟಣದ ಹತ್ತಾರು ಜನರನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚು ಮುಷ್ಯ (ಕೋತಿ) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದಿಂದ ಆಗಮಿಸಿದ್ದ ಕೋತಿ ಸೆರೆಗಾರರು, ಬುಧವಾರ ದೇವಿ ಗುಡಿ ಹತ್ತಿರದ ಗಿಡದಲ್ಲಿದ್ದ ಮಂಗನಿಗೆ ತಿನ್ನಲು ಮಿರ್ಚಿ, ಭಜಿ, ಕಡಲೆ ಬೀಜ, ಬಾಳೆಹಣ್ಣು ಹಾಕಿ ಸಲೀಸಾಗಿ ಬೋನಿಗೆ ಬೀಳುವಂತೆ ಮಾಡಿದರು.

ರಸ್ತೆ ಮೇಲೆ ಓಡಾಡುವವರ ಮೇಲೆ ಹಠಾತ್ ದಾಳಿ ನಡೆಸುತ್ತಿದ್ದ ಮುಷ್ಯ, ಮೂರ್ನಾಲ್ಕು ದಿನದಲ್ಲಿ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಇದರಿಂದ ನಾಗರಿಕರು ಭೀತಿಗೊಳಗಾಗಿದ್ದರು.

ಕೋತಿ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಚನ್ನಬಸವರಾಜ ಲಿಂಗಸುಗೂರು, ಉಪವಲಯ ಅರಣ್ಯಾಧಿಕಾರಿ ಹುಸೇನ್ ಬಾಷಾ, ಗಾರ್ಡ್ ಹುಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net