ಮಸ್ಕಿ-ಹೂವಿನಭಾವಿ ರಸ್ತೆ ಅಭಿವೃದ್ಧಿಪಡಿಸಲಿ

4 MASKI 01
ಹೂವಿನಭಾವಿ, ಬುದ್ದಿನ್ನಿ, ಮುದಬಾಳ ಗ್ರಾಮಸ್ಥರು ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಬಸವರಾಜ ಬುದ್ದಿನ್ನಿ, ವೀರೇಶ ಬುದ್ದಿನ್ನಿ, ಅಬ್ದುಲ್ ಸಾಬ್ ಮಸ್ಕಿ, ಸಣ್ಣಯಲ್ಲಪ್ಪ ಬುದ್ದಿನ್ನಿ, ದ್ಯಾಮಪ್ಪ ಬುದ್ದಿನ್ನಿ, ಕಾಸಿಂ ಸಾಬ್ ಬುದ್ದಿನ್ನಿ, ಶಾಂತಪ್ಪ ಬಡಿಗೇರ, ಹನುಮಂತಪ್ಪ ಚತ್ರಪ್ಪ, ಮಲ್ಲಯ್ಯ ಇತರರಿದ್ದರು.
Published on

ಮಸ್ಕಿ: ತಾಲೂಕಿನ ಹೂವಿನಭಾವಿ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿ ಹೂವಿನಭಾವಿ, ಬುದ್ದಿನ್ನಿ, ಮುದಬಾಳ ಗ್ರಾಮಸ್ಥರು ಭಾನುವಾರ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮನವಿ ಸಲ್ಲಿಸಿದರು.

ಮಸ್ಕಿಯಿಂದ ಮುದಬಾಳ, ಬುದ್ದಿನ್ನಿ ಮಾರ್ಗವಾಗಿ ಹೂವಿನಭಾವಿ ಗ್ರಾಮಕ್ಕೆ ಹೋಗುವ ರಸ್ತೆ ಹಾಳಾಗಿದ್ದು, ಈ ಭಾಗದಲ್ಲಿರುವ ಹೊಲಗಳಿಗೆ ತೆರಳಲು ರೈತರಿಗೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಮಳೆ ನೀರು ನಿಂತು ರಸ್ತೆ ಹಾಳಾಗುತ್ತಿದೆ. ಅಲ್ಲದೆ ತಗ್ಗು ದಿನ್ನೆಗಳು ಇರುವುದರಿಂದ ವಾಹನಗಳ ಸಂಚಾರಕ್ಕೆ ಹಾಗೂ ರೈತರು ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net