ಹೋರಾಟ ಕೈಬಿಡಲು ರೈತರಿಗೆ ಮನವಿ; ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್

29012021 Masky formars protest pratapgowda patil visit
Published on

ಮಸ್ಕಿ: 5ಎ ನಾಲೆ ಯೋಜನೆ ಜಾರಿಗಾಗಿ ತಾಲೂಕಿನ ಪಾಮಕಲ್ಲೂರು ಬಳಿ 68 ದಿನಗಳಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಶುಕ್ರವಾರ ಭೇಟಿ ನೀಡಿ, ಹೋರಾಟ ಕೈ ಬಿಡುವಂತೆ ಮನವಿ ಮಾಡಿದರು.

ಈ ವೇಳೆ ರೈತರನ್ನುದ್ದೇಶಿಸಿ ಮಾತನಾಡಿದ ಅವರು, 5ಎ ನಾಲೆ ಜಾರಿಯ ಬಗ್ಗೆ ಯಾರಿಗಾದರೂ ಏನೇ ಅನುಮಾನವಿದ್ದರೂ ನನ್ನನ್ನು ಕೇಳಲಿ. ಅವರೊಂದಿಗೆ ನಾನು ಎಲ್ಲಿಗೆ ಬೇಕಾದರೂ ಬರುತ್ತೇನೆ. ಕ್ಷೇತ್ರಕ್ಕೆ ನೀರಾವರಿ ಯೋಜನೆ ಜಾರಿಯಾದರೆ ಅದು ನನಗೆ ಕಿರ್ತಿ ಹೆಚ್ಚುತ್ತದೆ. ಆದರೆ, ಯೋಜನೆ ಜಾರಿಯಾಗದಂತೆ ತಡೆದರೆ ನನಗೇನು ಲಾಭ? ಎಂದು ರೈತರನ್ನು ಪ್ರಶ್ನಿಸಿದರು.

5ಎ ಯೋಜನೆ ಹೋರಾಟಗಾರರು ಒಪ್ಪಿದರೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವೆ. ಮುಖ್ಯಮಂತ್ರಿ, ಸಚಿವರು, ಅಧಿಕಾರಗಳಿಗೆ ಹೋರಾಟಗಾರರು ಮನವಿ ಮನವರಿಕೆ ಮಾಡಿಕೊಡಲಿ. ತಾಂತ್ರಿಕ ಮಾಹಿತಿ ನೀಡಲಿ. 5ಎ ಯೋಜನೆ ಜಾರಿ ಮಾಡುವಂತೆ ಮನವಿ ಮಾಡೋಣ. ಹೋರಾಟಗಾರರು ಒಪ್ಪಿದ್ರೆ 2-3 ದಿನಗಳಲ್ಲಿ ರೈತರ ಭೇಟಿಗಾಗಿ ಸಿಎಂ ಬಳಿ ಅವಕಾಶ ಕೇಳುವೆ ಎಂದರು.

ವಾದ-ಪ್ರತಿವಾದ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮತ್ತು ಹೋರಾಟ ಸಮಿತಿಯ ಗೌರವ ಅಧ್ಯಕ್ಷ ತಿಮ್ಮನಗೌಡ ಚಿಲ್ಕಾರಾಗಿ ನಡುವೆ ವಾದ-ಪ್ರತಿವಾದ ನಡೆಯಿತು. 5ಎ ನಾಲೆ ಯೋಜನೆ ಜಾರಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪಾಟೀಲರು ವಿವರಿಸುವಾಗ ಮಧ್ಯೆ ಪ್ರವೇಶಿಸಿದ ಚಿಲ್ಕಾರಾಗಿ, ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದರು. ಮೊದಲು ಪರಸ್ಥಿತಿ ತಿಳಿಯಾಗಲಿ. ಸಿಎಂ ಭೇಟಿಗೆ ಇಂದೇ ಬರಬೇಕೆಂದಿಲ್ಲ. ಎರಡು ದಿನ ಕಾಲಾವಕಾಶ ಪಡೆದುಕೊಂಡು ನಂತರ ತಿಳಿಸಿ ಎಂದು ಪ್ರತಾಪಗೌಡರು ಹೇಳೀದರು. ಇದಕ್ಕೆ ರೈತ ಮುಖಂಡರು ಸಮ್ಮತಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net