ಮಸ್ಕಿ, ದೇವದುರ್ಗ ತಾಲೂಕು ಅಧ್ಯಕ್ಷರ ವಜಾ

17-msk-2
Published on

ಮಸ್ಕಿ: ಕರ್ನಾಟಕ ರೈತ ಸಂಘ(ಕೆಆರ್‌ಎಸ್) ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರ ಅವರನ್ನು ಸಂಘದಿಂದ ವಜಾಗೊಳಿಸಲಾಗಿದೆ ಎಂಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಶೋಕ ನಿಲೋಗಲ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ತಿದ್ದಿಕೊಳ್ಳುವಂತೆ ಹಲವಾರು ಸಲ ಹೇಳಲಾಗಿತ್ತು. ತಪ್ಪುಗಳನ್ನು ತಿದ್ದಿಕೊಳ್ಳದ ಕಾರಣ ಸಂತೋಷ ಹಿರೇದಿನ್ನಿ, ಮಾರುತಿ ಜಿನ್ನಾಪೂರ ಹಾಗೂ ದೇವದುರ್ಗ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿಯನ್ನು ವಜಾಗೊಳಿಸಲಾಗಿದೆ. ನಮ್ಮ ಸಂಘಟನೆಗೂ ಅವರಿಗೂ ಯಾವುದೇ ಸಂಬಂಧ ಇಲ್ಲಾ ಎಂದರು.

ಫೆ.1 ರಂದು ಮಸ್ಕಿಯಲ್ಲಿ ಆರ್.ಮಾನ್ಸಯ್ಯ ಹಾಗೂ ಎಂ.ಗಂಗಾಧರ ಕರೆದಿರುವ ಸಭೆಗೆ ಸಂಘದ ಸದಸ್ಯರು ಹೋಗಬಾರದು. ಒಂದೆರಡು ದಿನಗಳಲ್ಲಿ ಮಸ್ಕಿ ಹಾಗೂ ದೇವದುರ್ಗ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಅಶೋಕ ನೀಲೋಗಲ್ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ರಮೇಶ ಪಾಟೀಲ್ ಬೇರ್ಗಿ, ಚಿಟ್ಟಿಬಾಬು, ರಾಜಸಾಬ್, ಹನುಮಂತಪ್ಪ ಉದ್ಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net