ಖಾಸಗೀಕರಣವನ್ನು ಗ್ರಾಹಕರೂ ವಿರೋಧಿಸಲಿ; ಕೆಪಿಟಿಸಿಎಲ್ ನೌಕರರ ಆಗ್ರಹ

09082022 maski news
Published on

ಕೇಂದ್ರ ಸರ್ಕಾರದ ನೀತಿಗೆ ಖಂಡನೆ

ಮಸ್ಕಿ: ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಇಲಾಖೆಯ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ಪ್ರಸರಣ ನಿಗಮದ ನೌಕರರ ಒಕ್ಕೂಟ, ಡಿಪ್ಲೊಮಾ ಇಂಜಿನಿಯರ್ಸ್‌ ಅಸೋಸಿಯೇಷನ್, ಇಂಜಿನಿಯರ್ಸ್‌ ಅಸೋಸಿಯೇಷನ್, ಕೆಪಿಟಿಸಿಎಲ್ ಎಸ್ಸಿ, ಎಸ್ಟಿ ನೌಕರರ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಖಾಸಗೀಕರಣದಿಂದ ಗ್ರಾಹಕರು ವಿದ್ಯುತ್ ವೆಚ್ಚವನ್ನು ಹೆಚ್ಚಿಗೆ ಭರಿಸಬೇಕಾಗುತ್ತದೆ. ಇದರಿಂದಾಗಿ ಗ್ರಾಹಕರು ಸಹ ಖಾಸಗೀಕರಣವನ್ನು ವಿರೋಧಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net