

ಮಸ್ಕಿ: ಶಕ್ತಿ ಯೋಜನೆಯಡಿ ಕಳೆದ ಎರಡು ವರ್ಷದಲ್ಲಿ ಮಹಿಳೆಯರು 500 ಕೋಟಿ ಟಿಕೆಟ್ ಉಚಿತವಾಗಿ ಪಡೆದು ಸಂಚರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಶಾಸಕ ಆರ್.ಬಸನಗೌಡ ತುರ್ವಿಹಾಳ ಪ್ರಯಾಣಿಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಚಲಿಸುತ್ತಿದ್ದ ಬಸ್ ಹತ್ತಿದ ಶಾಸಕ ಬಸನಗೌಡ ಅವರು, ಶಕ್ತಿ ಯೋಜನೆ ಬಗ್ಗೆ ಪ್ರಯಾಣಿಕರೊಂದಿಗೆ ಚರ್ಚಿಸಿದರು. ವೃದ್ಧರು, ಮಹಿಳೆಯರು, ವಿದ್ಯಾರ್ಥಿನಿಯರು ಯೋಜನೆಯ ಲಾಭ ಪಡೆದಿದ್ದು ಅನುಕೂಲವಾಗಿದೆ ಎಂದು ಪ್ರಯಾಣಿಕರು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೇಕೆಹಾಕಿ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಿಬೂಬಸಾಬ್ ಮುದ್ದಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ, ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಕೃಪಸ ಸಂಘದ ಅಧ್ಯಕ್ಷ ನಾಗಭೂಷಣ ಮಲ್ಲಯ್ಯ ಬಳ್ಳಾ, ಮಲ್ಲನಗೌಡ ಸುಂಕನೂರು, ಪುರಸಭೆ ಸದಸ್ಯರಾದ ಮಲ್ಲಯ್ಯ ಚಿಗರಿ, ಕೃಷ್ಣ ಚಿಗರಿ, ಬಿ.ಜಿ.ನಾಯಕ್, ಮಲ್ಲಯ್ಯ ಮುರಾರಿ, ನೂರ್ ಅಹ್ಮದ್, ಆನಂದ ಕುಮಾರ್, ದುರ್ಗರಾಜ್, ಆನಂದ ವೀರಾಪುರ, ಕೆಡಿಪಿ ಸದಸ್ಯೆ ರಾಜೇಶ್ವರಿ ನಾಯಕ, ಬೇಗಂ ಹವಾಲ್ದಾರ್, ನಾಗರತ್ನಾ ಕಟ್ಟಿಮನಿ, ತಾಪಂ ಇಒ ಅಮರೇಶ ಯಾದವ್, ಬಸ್ ಡಿಪೋ ಮ್ಯಾನೇಜರ್ ಆದಪ್ಪ ಇತರರಿದ್ದರು