ಕೊಪ್ಪಳ ಸಂಸದರಿಂದ ಚುನಾವಣಾ ಪ್ರಚಾರ

21122021 Maski BJP Compein
Published on


ಮಸ್ಕಿ: ಪುರಸಭೆ ಚುನಾವಣೆ ಡಿ.27ರಂದು ನಡೆಯಲಿರುವ ಕಾರಣ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಂಗಳವಾರ ಬಿಜೆಪಿ ಪರವಾಗಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿವಿಧ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

1ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಲಲಿತಾ ಪ್ರಕಾಶ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಬಲ ವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಿದೆ. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಇಡೀ ವಿಶ್ವವೇ ಅವರನ್ನು ಮೆಚ್ಚಿಕೊಂಡಿದೆ. ದೇಶದಲ್ಲಿ ಐಕ್ಯತೆ ಹಾಗೂ ಭದ್ರತೆ ದೃಷ್ಟಿಯಿಂದ ಬಿಜೆಪಿ ಅಧಿಕಾರದಲ್ಲಿರಬೇಕು. ಲಲಿತಾ ಪ್ರಕಾಶ ಅವರನ್ನು ಬೆಂಬಲಿಸಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಡಾ, ಬಿ.ಎಚ್, ದಿವಟರ್, ಬಸನಗೌಡ ಪೊಲೀಸ್‌ಪಾಟೀಲ್, ಉಮಕಾಂತಪ್ಪ ಸಂಗನಾಳ, ದೊಡ್ಡಪ್ಪ ಕಡಬೂರು, ಎಂ. ಪ್ರಭುದೇವ್, ನಿವೃತ್ತ ಶಿಕ್ಷಕ ಯಲ್ಲಪ್ಪ ಜಾಲಿಹಾಳ, ಬಿಜೆಪಿ ಎಸ್ಸಿ ಮೊರ್ಚದ ಜಿಲ್ಲಾ ಘಟಕದ ಅದ್ಯಕ್ಷ ಶರಣಬಸವವಕೀಲ್, ಪುರಸಭೆ ಮಾಜಿ ಸದಸ್ಯರಾದ ಕಿರಣ್ ಸಾನಬಾಳ, ಅಭಿಜಿತ್ ಪಾಟೀಲ್, ಮಲ್ಲಿಕಾರ್ಜುನ ಬೈಲಗುಡ್ಡ, ಅಭ್ಯರ್ಥಿ ಲಲಿತಾ ಪ್ರಕಾಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net