

ಮಸ್ಕಿ: ಪಟ್ಟಣದ ಕವಿತಾಳ ಕ್ರಾಸ್ ಹತ್ತಿರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಲಿಂಗಸುಗೂರು ಆಹಾರ ಇಲಾಖೆ ನಿರೀಕ್ಷಕ ಅಬ್ದುಲ್ ರವೂಫ್ ನೇತೃತ್ವದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ದಾಳಿ ನಡೆಸಿ, 50 ಕೆಜಿ ತೂಕದ 264 ಹಾಗೂ 25 ಕೆಜಿ ತೂಕದ 26 ಅಕ್ಕಿ ಚೀಲಗಳು ಅಂದರೆ 2.7 ಲಕ್ಷ ರೂ. ಮೌಲ್ಯದ 138 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಗುರುರಾಜ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.