ಆರೋಪ ಹೊತ್ತ ಪಿಡಿಒ ನಮಗೆ ಬೇಡ

maremma
maremma
Published on

ಮಸ್ಕಿ: ಗುಡದೂರು ಗ್ರಾಪಂಗೆ ವರ್ಗಾವಣೆಯಾಗಿ ಬಂದಿರುವ ಪಿಡಿಒ ಮಲ್ಲಯ್ಯ ಅವರನ್ನು ಬಿಟ್ಟು ಈಗ ಕರ್ತವ್ಯದಲ್ಲಿರುವ ಲಕ್ಷ್ಮೀಕಾಂತ ಅವರನ್ನೇ ಮುಂದುವರಿಸುವಂತೆ ಗ್ರಾಪಂ ಅಧ್ಯಕ್ಷೆ ಮಾರೆಮ್ಮ ಹುಲಗಪ್ಪ ಕಂಬಗಲ್ ಆಗ್ರಹಿಸಿದರು.

ಈ ಹಿಂದೆ ಕರ್ತವ್ಯದಲ್ಲಿದ್ದ ಮಲ್ಲಯ್ಯ ಅವರ ಮೇಲೆ ಅನೇಕ ಆರೋಪಗಳಿವೆ. ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು 25 ಜನ ಸದಸ್ಯರು ದೂರು ನೀಡಿದ ಪರಿಣಾಮ ವರ್ಗಾವಣೆಯಾಗಿದ್ದರು. ಈಗ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಹಕಾರದಿಂದ ಪುನಃ ಗುಡದೂರು ಗ್ರಾಪಂಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಅವರು ನಮಗೆ ಬೇಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಿರುವ ಪಿಡಿಒ ಲಕ್ಷ್ಮೀಕಾಂತ ಅವರ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಅವರನ್ನು ಅನಾವಶ್ಯಕವಾಗಿ ವರ್ಗಾವಣೆ ಮಾಡಬಾರದು ಎಂದು ಗ್ರಾಪಂ ಸದಸ್ಯರು ಒತ್ತಾಯಿಸಿದ್ದಾರೆ. ಪಿಡಿಒ ಮಲ್ಲಯ್ಯ ಅವರ ವರ್ಗಾವಣೆ ಮಾಡದಿದ್ದರೆ ಗ್ರಾಪಂ ಸರ್ವ ಸದಸ್ಯರು ಪಂಚಾಯಿತಿಗೆ ಬರುವುದಿಲ್ಲ ಎಚ್ಚರಿಸಿದರು. ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಗೋನಾಳ, ಅಮರೇಶ ದೀನಸಮುದ್ರ, ಮರಿಸ್ವಾಮಿ ಗೋನಾಳ, ನರಸಪ್ಪ ಹೆಡಗಿಬಾಳ ಕ್ಯಾಂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net