ಮಸ್ಕಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್, ಸಾಬೂನು ವಿತರಿಸಿದ ಪ್ರತಾಪಗೌಡ ಪಾಟೀಲ್

29032020 Maski Mask distributor
Published on

ಮಸ್ಕಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ಭಾನುವಾರ ಮಾಸ್ಕ್ ಹಾಗೂ ಸಾಬೂನು ವಿತರಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದಿನಸಿ ಹಾಗೂ ತರಕಾರಿ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಜಾಗೃತಿ ಮೂಡಿಸಿದರು. ಏ.14 ರವರೆಗೆ ಮನೆ ಬಿಟ್ಟು ಬರದಂತೆ ಮನವಿ ಮಾಡಿದರು. ಅಗತ್ಯ ವಸ್ತುಗಳು ಬೇಕಾದರೆ ಮನೆಯ ಒಬ್ಬ ಸದಸ್ಯರು ಮಾತ್ರ ಬಂದು ವಸ್ತುಗಳನ್ನು ಕೊಂಡು ಹೋಗಬೇಕು. ಅನಗತ್ಯವಾಗಿ ಹೊರಗಡೆ ಗುಂಪು-ಗುಂಪಾಗಿ ಯಾರೂ ಸುತ್ತಾಡಬಾರದು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ, ವೈದ್ಯಾಧಿಕಾರಿ ನಂದಕುಮಾರ, ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯನಗೌಡ, ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‌ಐ ಸಣ್ಣವೀರೇಶ, ಡಾ.ನಾಗರಾಜ ಚೌಶೆಟ್ಟಿ, ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಪುರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net