ಬಿಜೆಪಿ ಬೆಳವಣಿಗೆಗೆ ಅನೇಕರ ತ್ಯಾಗ ಬಲಿದಾನ

Maski balidan din celebrate bjp
ಮಸ್ಕಿ ಬಿಜೆಪಿ ಕಚೇರಿಯಲ್ಲಿ ಜನ ಸಂಘದ ಸಂಸ್ಥಾಪಕರಾದ ಡಾ.ಶ್ಯಾಮಾಪ್ರಸಾದ ಮುಖರ್ಜಿ ಬಲಿದಾನ ದಿನದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು. ಪ್ರಮುಖರಾದ ಮಲ್ಲಪ್ಪ ಅಂಕುಶದೊಡ್ಡಿ, ಚಂದ್ರಕಾಂತ ಪಾಟೀಲ ಗೂಗೆಬಾಳ ಮಲ್ಲಯ್ಯ ಅಂಬಾಡಿ, ಜಗದೀಶತಾತ ಹಾಲಾಪುರ, ಇದ್ದರು.
Published on

ಮಸ್ಕಿ: ಜಗತ್ತಿನಲ್ಲಿ ಭಾರತೀಯ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಈ ಬೆಳವಣಿಗೆಯಲ್ಲಿ ಅನೇಕರ ತ್ಯಾಗ ಬಲಿದಾನಗಳಿದ್ದು, ಶ್ಯಾಮಾಪ್ರಸಾದ ಮುಖರ್ಜಿ ಪ್ರಮುಖರಾಗಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಜನ ಸಂಘದ ಸಂಸ್ಥಾಪಕ ಡಾ.ಶ್ಯಾಮಾಪ್ರಸಾದ ಮುಖರ್ಜಿ ಬಲಿದಾನದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖರ್ಜಿ ಅವರಿಂದ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವ ಉಳಿದಿದೆ ಎಂದರು.

ಬಿಜೆಪಿಯ ಹಿರಿಯ ನಾಯಕ ಮಲ್ಲಪ್ಪ ಅಂಕುಶದೊಡ್ಡಿ ಅವರು ಡಾ.ಶ್ಯಾಮಾಪ್ರಸಾದ ಮುಖರ್ಜಿ ಅವರ ಜೀವನ ಚರಿತ್ರೆ ಕುರಿತು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಮಾತನಾಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ ಗೂಗೆಬಾಳ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಮುಖರಾದ ಜಗದೀಶ ತಾತ ಹಾಲಾಪುರ, ಎರಿತಾತ ಜಂಗಮರಹಳ್ಳಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಗುಡಿಹಾಳ, ರಮೇಶ ಉದ್ಬಾಳ, ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮೌನೇಶ ನಾಯಕ, ಪುರಸಭೆ ಸದಸ್ಯರಾದ ಸುರೇಶ ಹರಸುರು, ಚೇತನ ಪಾಟೀಲ, ಬಸವರಾಜ ಬುಕ್ಕಣ್ಣ, ಕೇಶವಮೂರ್ತಿ, ಡಾ.ವೆಂಕಟೇಶ ಕೋಳಬಾಳ, ಬಸವರಾಜ ಇಲಕಲ್ಲ, ಚನ್ನಬಸವ ಹಾಲಾಪುರ, ಪಂಪಣ್ಣ ಮಡಿವಾಳ, ಗದ್ಯಪ್ಪ ಮಡಿವಾಳ, ಗಂಗಾಧರ್ ಕಂಬಾಳಿಮಠ, ಮಲ್ಲಿಕಾರ್ಜುನ ಗೋನಾಳ, ಬಸವರಾಜ ದೀನಸಮುದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net