ಏಮ್ಸ್ ಗಾಗಿ ಎರಡು ವರ್ಷಗಳಿಂದ ಸತ್ಯಾಗ್ರಹ

Maski AIMS protest
ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಮಸ್ಕಿಯಲ್ಲಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಮೌನೇಶ ಹಸಮಕಲ್, ದೇವಪ್ಪ ಮಾಸ್ತರ್, ಸಿದ್ದು ನಾಯಕ, ನಾಗರಾಜ್, ಯಂಕೋಬ, ಅಮರೇಶ, ಆಂಜನೆಯ, ಹನುಮಂತ ಇತರರು ಇದ್ದರು.
Published on

ಮಸ್ಕಿ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಯನ್ನು ರಾಯಚೂರಿನಲ್ಲಿಯೇ ಮಂಜೂರು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಮಸ್ಕಿ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರವೇ ಅಧ್ಯಕ್ಷ ಆರ್.ಕೆ.ನಾಯಕ ಮಾತನಾಡಿ, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ 2 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಏಮ್ಸ್ ಹೋರಾಟವನ್ನು ಕರವೇ ಬೆಂಬಲಿಸುತ್ತದೆ ಎಂದರು.

ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಮಸ್ಕಿಯಲ್ಲಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಮೌನೇಶ ಹಸಮಕಲ್, ದೇವಪ್ಪ ಮಾಸ್ತರ್, ಸಿದ್ದು ನಾಯಕ, ನಾಗರಾಜ್, ಯಂಕೋಬ, ಅಮರೇಶ, ಆಂಜನೆಯ, ಹನುಮಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net