ಸಂಗೀತ ಕಚೇರಿ

New PM New
Published on

ಹುಬ್ಬಳ್ಳಿ : ಇಲ್ಲಿನ ಸಿಂಫೋನಿ ಇನ್​ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ನ. 24ರಂದು ಸಂಜೆ 5.30ಕ್ಕೆ ಸಂಗೀತ ಕಛೇರಿ ಆಯೋಜಿಸಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಇಲ್ಲಿನ ಸಿಂಫೋನಿ ಇನ್​ಸ್ಟಿಟ್ಯೂಟ್ ಆಫ್ ಮ್ಯೂಸಿಕ್​ನ ನಿರ್ದೇಶಕ ಸಂತೋಷ ಮೋಕಾಶಿ, ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಕೊಳಲು ಕಲಾವಿದರಾದ ಪಂ. ಪ್ರವೀಣ ಗೋಡ್ಖಿಂಡಿ ಹಾಗೂ ಅವರ ಪುತ್ರ ಶಡಜ್ ಗೋಡ್ಖಿಂಡಿ ಅವರ ಜುಗಲಬಂದಿ ಆಯೋಜಿಸಲಾಗಿದೆ. ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಇಶಾನ್ ಘೋಷ್ ಅವರು ತಬಲಾ ಸಾಥ್ ನೀಡಲಿದ್ದಾರೆ ಎಂದರು.

ಇದಕ್ಕೂ ಮೊದಲು ಧಾರವಾಡದ ರೇವತಿ ಅನಿಲಕುಮಾರ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಚಿದಂಬರ ಜೋಶಿ ಅವರು ಹಾಮೋನಿಯಂ ಹಾಗೂ ಪ್ರಸಾದ ಮಡಿವಾಳರ ಅವರು ತಬಲಾ ಸಾಥ್ ನೀಡುವರು ಎಂದು ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಲು ಸಹಾಯ ಮಾಡುವ ಉದ್ದೇಶದಿಂದ ನಿಧಿ ಸಂಗ್ರಹಣೆಗಾಗಿ ಈ ಸಂಗೀತ ಕಚೇರಿ ಆಯೋಜಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸ್ವರ್ಣ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾ. ವಿ.ಎಸ್.ವಿ. ಪ್ರಸಾದ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ವಿನಯ ನಾಯಕ, ಶಂಕರ ಪಾಟೀಲ, ಪ್ರಕಾಶ ಕುಲಕರ್ಣಿ, ಸಾಗರ ಗ್ರಾಮಪುರೋಹಿತ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net