

ಮೈಸೂರು: ಬಿಲ್ಡರ್‌ಗಳ ಸಂಸ್ಥೆ ಹಾಗೂ ವಿದ್ಯುಲ್ಲಹರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸೆ.23ರ ಸಂಜೆ 5.30ಕ್ಕೆ ಸ್ಟರ್ಲಿಂಗ್ ಚಿತ್ರಮಂದಿರ ಬಳಿಯ ಎಂಬಿಸಿಟಿ ಸಭಾಂಗಣದಲ್ಲಿ ಗಾಯಕರಾದ ಡಾ.ಪಿ.ಬಿ.ಶ್ರೀನಿವಾಸ್ ಮತ್ತು. ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮ ಸಲ್ಲಿಸುವ ಸಲುವಾಗಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಲ್ಡರ್‌ಗಳ ಸಂಸ್ಥೆಯ ಮೈಸೂರು ಶಾಖೆ ಅಧ್ಯಕ್ಷ ನಾಗರಾಜ್ ಭೈರಿ ತಿಳಿಸಿದರು.
ಈ ಇಬ್ಬರು ಸಂಗೀತ ಸಾರ್ವಭೌಮರ ನೆನಪಿನ ಅಂಗವಾಗಿ ಎಂದೂ ಮರೆಯದ ಹಾಡು ಎಂಬ ಈ ಕಾರ್ಯಕ್ರಮವನ್ನು ದೂರದರ್ಶನ ಕಲಾವಿದರಾರ ಡಾ.ಎ.ಡಿ.ಶ್ರೀನಿವಾಸನ್ ಅವರ ಸಾರಥ್ಯದಲ್ಲಿ ನಡೆಸಲಾಗುತ್ತಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. ಇನ್ನಿತರ ಜನಪ್ರಿಯ ಗಾಯಕರಾದ ಡಾ.ಕೆ.ಎಸ್.ಮಂಜುನಾಥ್, ಹಂಸಿನಿ ಕುಮಾರ್ ಹಾಗೂ ಇತರರು ಸುಮಾರು 30 ಗೀತೆಗಳನ್ನು ಹಾಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.