

ಹೊಳೆನರಸೀಪುರ: ಗಣಪತಿ ಸೇವಾ ಸಮಿತಿ ವತಿಯಿಂದ ಸಮುದಾಯ ಭವನದಲ್ಲಿ ಗಣೇಶೋತ್ಸವದ ಅಂಗವಾಗಿ ಗುರುವಾರ ರಾತ್ರಿ ಹಾಸನದ ವಿದ್ವಾನ್ ಬಿ.ಎನ್.ಎಸ್.ಮುರಳಿ ಮತ್ತು ತಂಡದವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಭಿಕರ ಮೆಚ್ಚುಗೆ ಗಳಿಸಿತು.
ಮುರಳಿ ಮತ್ತು ತಂಡದವರು ಕರೋಕೆ ಮ್ಯೂಸಿಕ್ ಜತೆಯಲ್ಲಿ ಹರಿದಾಸ ಕೀರ್ತನೆಗಳು, ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ಶಾಸ್ತ್ರೀಯ ರಾಗಾಧಾರಿತ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು.
ಪುಷ್ಪಾ, ಚೈತ್ರಾ, ಹರಿಣಿ, ಪುಣ್ಯಶ್ರೀ, ವೀಣಾ, ವಾಣಿ, ಮಲ್ಲಿಕಾ, ಸೌಮ್ಯಾ, ಜಾಹ್ನವಿ, ಲಹರಿ, ಮುರುಳಿ ಅವರೊಂದಿಗೆ ಹಾಡಿ ರಂಜಿಸಿದರು. ಕಾರ್ಯಕ್ರಮದ ನಂತರ ಮಹಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಮುರಳಿ ಮತ್ತು ತಂಡದವರನ್ನು ಗೌರವಿಸಿದರು. ಪಾಶ್ಚಾತ್ಯ ಹಾಡುಗಳಿಗೆ ಮಾರು ಹೋಗುತ್ತಿರುವ ಈ ದಿನಗಳಲ್ಲಿ ಇಂತಹ ಸದಭಿರುಚಿಯ ಸಂಗೀತ ಕಾರ್ಯಕ್ರಮವನ್ನು ಸಮಿತಿಯವರು ಆಯೋಜಿಸಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂ ಅಭಿಪ್ರಾಯ ವ್ಯಕ್ತವಾಯಿತು.