

ಬೆಳಗಾವಿ: ಸಂಗೀತ ವಿಶಿಷ್ಟವಾದ ಕಲೆ. ಇದಕ್ಕಾಗಿ ಸಹನೆ, ಛಲ, ಸತತ ಪ್ರಯತ್ನದ ತಪಸ್ಸು ಬೇಕು. ಪ್ರಸಿದ್ಧಿ ಬರುವ ಸಮಯದಲ್ಲಿ ಬಂದೇ ಬರುತ್ತದೆ. ಆದರೆ ಪ್ರಸಿದ್ಧಿಗಾಗಿಯೇ ಸಂಗೀತ ಬೆನ್ನು ಹತ್ತಿದವರಿಗೆ ಅದು ಸಿಗಲಾರದು ಎಂದು ಹಿರಿಯ ಲೇಖಕ ಡಾ. ರಾಮಕೃಷ್ಣ ಮರಾಠೆ ಹೇಳಿದರು.
ಹಿಂದವಾಡಿಯ ಐಎಂಇಆರ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಪ್ತಸ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸತಿ ಮತ್ತು ವೇದ, ಉಪನಿಷತ್ತುಗಳು ಗುರುವಿಗಿಂತ ಬೇರೊಬ್ಬ ದೇವರಿಲ್ಲ ಎಂದು ಹೇಳುತ್ತವೆ. ಈಗ ಗುರು&ಶಿಷ್ಯರ ಸಂಬಂಧವೆನ್ನುವುದು ಉಳಿದುಕೊಂಡಿದ್ದರೆ ಅದು ಸಂಗೀತ ೇತ್ರದಲ್ಲಿ ಮಾತ್ರ ಎಂದರು.
ವಿದ್ಯಾರ್ಥಿಗಳಿಂದ ಹಿಂದುಸ್ತಾನಿ ಶಾಸಿಯ ಸಂಗೀತ, ಹಾಮೋರ್ನಿಯಂ, ತಬಲಾ, ಕಥಕ್ ಮತ್ತು ಭರತ ನಾಟ್ಯ ನೃತ್ಯಗಳ ಪ್ರದರ್ಶನ ನಡೆಯಿತು. ಮುಕುಂದ ಗೋರೆ, ನಾರಾಯಣ ಗಣಾಚಾರಿ, ಜೀತೇಂದ್ರ ಸಾಬಣ್ಣವರ, ಶ್ರೀಪತಿ ದೇವ, ನಿತಿನ ಸುತಾರ, ಪ್ರಮೋದ ಸೇಠ ಸಾಥ್ ನೀಡಿದರು. ಹಿರಿಯ ಲೇಖಕ ಎಲ್.ಎಸ್. ಶಾಸಿ, ಸಂಗೀತ ವಿದ್ಯಾಲಯ ನಿರ್ದೇಶಕ ಸೂರ್ಯಪ್ರಕಾಶ ಅಯ್ಯರ, ನಿರ್ಮಲಾ ಪ್ರಕಾಶ, ಗೀತಾ ಸಬಾನೆ, ಪೂರ್ವಿ ರಾಜಪುರೋಹಿತ, ಶ್ರೀಲೇಖಾ ಇತರರಿದ್ದರು.