ಒತ್ತಡ ನಿವಾರಿಸಿ ಮನಸ್ಸಿಗೆ ಮುದ ನೀಡಲಿದೆ ಸಂಗೀತ

mysore
Published on

ಮೈಸೂರು: ಒತ್ತಡ ಸಂದರ್ಭದಲ್ಲಿ ಸಂಗೀತ ಆಲಿಸಿದರೆ ಮನಸ್ಸಿಗೆ ಮುದವನ್ನುಂಟು ಮಾಡುತ್ತದೆ ಎಂದು ಅಲೆಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ.ಭೈರಿ ಹೇಳಿದರು.


ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ, ಗಾನ- ನಂದನ ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸವಿಗಾನ-3 ಹಾಗೂ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಂಗೀತ ಒತ್ತಡ ನಿವಾರಕ, ಸಂಗೀತದಿಂದ ಮನೋಲ್ಲಾಸ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಗೀತ ಪ್ರೇಮಿಗಳಾಗಬೇಕು, ಸಂಗೀತವನ್ನು ಆಸ್ವಾದಿಸಬೇಕು ಎಂದರು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಪತ್ರಕರ್ತರು ಒಂದು ರೀತಿಯಲ್ಲಿ ಗಡಿ ಕಾಯುವ ಯೋಧರಿದ್ದಂತೆ. ದಿನವಿಡೀ ಕೆಲಸ ಮಾಡಿ, ಬೆಳಗ್ಗೆ ತಾಜಾ ಸುದ್ದಿಗಳನ್ನು ಓದುಗರಿಗೆ ಮುಟ್ಟಿಸುತ್ತಾರೆ ಎಂದರು.


ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಮಾತನಾಡಿ, ತಾತಯ್ಯನವರ ಕಾಲದಿಂದಲೂ ಮೈಸೂರು ಪತ್ರಿಕೋದ್ಯಮಕ್ಕೆ ತನ್ನದೇ ಆದ ಘನತೆ, ಗೌರವ ಇದೆ. ಈಗಲೂ ಅದು ಉಳಿದುಕೊಂಡು ಬಂದಿದೆ ಎಂದರು.


ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಂತಿರುವ ಪತ್ರಕರ್ತರು ನೈತಿಕತೆ ಹಾಗೂ ವಿಶ್ವಾಸಾರ್ಹತೆ ಉಳಿಸಿಕೊಂಡೇ ಕೆಲಸ ಮಾಡಬೇಕಿದೆ ಎಂದರು.


ಪ್ರಶಸ್ತಿ ಪ್ರದಾನ:


‘ವಿಜಯವಾಣಿ’ ಪತ್ರಿಕೆ ಮೈಸೂರಿನ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಪತ್ರಕರ್ತರಾದ ಕೆ.ಜೆ.ಲೋಕೇಶ್‌ಬಾಬು ಹಾಗೂ ಎಸ್.ಪ್ರಕಾಶ್‌ಬಾಬು ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಮ.ನ.ಲತಾ ಮೋಹನ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್, ಮುಖಂಡರಾದ ಎ.ಜಿ.ದೇವರಾಜ್, ಎಸ್.ವೆಂಕಟೇಶ್, ಡಾ.ವೈ.ಡಿ.ರಾಜಣ್ಣ, ರಾಜಶೇಖರ್ ಕದಂಬ, ಡಾ.ಶಂಕರೇಗೌಡ, ಟಿ.ಸತೀಶ್ ಜವರೇಗೌಡ, ಇಂದಿರಾ ವೆಂಕಟೇಶ್, ಲಕ್ಷ್ಮೀದೇವಿ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net