ಸಂಗೀತ ಗಾಯನ-ತಬಲ ಜುಗಲ್‌ಬಂದಿ

ಮುಕುಂದ್ ಪಂಡಿತ್ ಹಾಗೂ ಅನಿರುದ್ದ ಪಂಡಿತ್
Published on


ಮೈಸೂರು: ನಗರದ ಸ್ವರಸಂಕುಲ ಸಂಗೀತ ಸಭಾದ ವತಿಯಿಂದ ನ.27ರಂದು ಸಂಜೆ 5.30ಕ್ಕೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಹಿಂದುಸ್ತಾನಿ ಸಂಗೀತ ಗಾಯನ ಮತ್ತು ತಬಲ ಜುಗಲ್‌ಬಂದಿ ವಾದನ ಕಾರ್ಯಕ್ರಮ ಆಯೋಜಿಸಲಾಗಿದೆ.


ಪೂನಾದ ಪಂಡಿತ್ ಜಯಂತ್ ಕೈಜ್ಕರ್ ಹಿಂದುಸ್ತಾನಿ ಸಂಗೀತ ಕಛೇರಿ ನೀಡಲಿದ್ದು, ಪಂಡಿತ್ ವೀರಭದ್ರಯ್ಯ ಹಿರೇಮಠ (ಹಾರ್ಮೋನಿಯಂ) ಮತ್ತು ಪಂಡಿತ್ ಭೀಮಾಶಂಕರ್ ಬಿದನೂರ್ (ತಬಲ) ಸಾಥ್ ನೀಡಲಿದ್ದಾರೆ.


ಬಳಿಕ ಪೂನಾದ ಮುಕುಂದ್ ಪಂಡಿತ್ ಹಾಗೂ ಅನಿರುದ್ಧ ಪಂಡಿತ್ ಅವರ ತಬಲ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದ್ದು, ಪಂಡಿತ್ ಪ್ರಭುರಾವ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net