10 ಸಂಸ್ಥೆಗಳೊಂದಿಗೆ ಸಂಗೀತ ವಿವಿ ಒಡಂಬಡಿಕೆ

26BGMYSMUSICUNIVERSITY
Published on

ಮೈಸೂರು: ಸಂಗೀತ ಮತ್ತು ಪ್ರದರ್ಶಕ ಕಲೆಗಳ ಪ್ರಕಾರ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ 10 ಸಂಸ್ಥೆಗಳೊಂದಿಗೆ ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ.


ಶಿವಮೊಗ್ಗದ ಶ್ರೀ ವಿಜಯ ಕಲಾನಿಕೇತನ, ಕೊಪ್ಪಳದ ವಿಸ್ತಾರ ರಂಗಶಾಲೆ, ಮೈಸೂರಿನ ನೃತ್ಯವರ್ಣ ಕಲಾ ಸೌರಭ ಟ್ರಸ್ಟ್, ಬೆಂಗಳೂರಿನ ಶ್ರೀ ಮೇಧ ಕಾಲೇಜ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್, ಎಬಿಲಿಟಿ ಆನ್ ಲಿಮಿಟೆಡ್ ಟ್ರಸ್ಟ್, ರುದ್ರ ಅಕಾಡೆಮಿ, ಶಾಂಭವಿ ಸ್ಕೂಲ್ ಡ್ಯಾನ್ಸ್, ನಾಟ್ಯಾಂತರಂಗ ಟ್ರಸ್ಟ್, ಆಡಿಯೋ ಲೈಫ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.


ಈವರೆಗೆ 49 ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ವಿವಿ ರಾಜ್ಯಾದ್ಯಂತ ತನ್ನ ಕೇಂದ್ರಗಳನ್ನು ಸ್ಥಾಪಿಸಿ ಸಂಗೀತಾಧಿ ಪ್ರದರ್ಶನ ಕಲೆಗಳ ಶಿಕ್ಷಣ ನೀಡುವ ಮಹತ್ತರವಾದ ಹೆಜ್ಜೆ ಇಟ್ಟಂತಾಗಿದೆ ಎಂದು ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net