ಮಕ್ಕಳು ಕಲಾಕ್ಷೇತ್ರದಲ್ಲಿ ಮುನ್ನಡೆಯಬೇಕು, ಕರ್ಜಗಿ ಸಲಹೆ

IMG_20250413_204804_623.jpg
Published on

ಹುಬ್ಬಳ್ಳಿ: ತಂದೆ ತಾಯಿಗಳಿಗೆ ಸಮಾಜದಲ್ಲಿ ಗೌರವ ತರಲು ಕಲಾಕ್ಷೇತ್ರದಲ್ಲಿ ಮಕ್ಕಳು ಮುನ್ನಡೆಯಬೇಕು ಎಂದು ಶ್ರೀ ಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗ್ಟನ್ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯ ಮುರಳಿ ಕರ್ಜಗಿ ಸಲಹೆ ನೀಡಿದರು.

ಶಾಲೆಯಲ್ಲಿ ಅಭಿನಯ ಲೋಕ ಸಂಸ್ಥೆ ಏರ್ಪಡಿಸಿರುವ ಬೇಸಿಗೆ ರಜೆಯ ಅಭಿನಯ ತರಬೇತಿ ಶಿಬಿರದಲ್ಲಿ ಸಂಗೀತ ತರಗತಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಅವರು, ಸಂಗೀತ, ನತ್ಯ, ಚಿತ್ರಕಲೆ ಮತ್ತು ನಾಟಕ ಕಲೆಗಳಲ್ಲಿ ಬಾಲ್ಯದಲ್ಲೇ ಪರಿಣತಿ ಪಡೆಯಲು ಮಕ್ಕಳು ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದರು.

ಮಕ್ಕಳು ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಸಮಾಜದಲ್ಲಿ ಅವರ ಪಾಲಕರ ಗೌರವವೂ ಹೆಚ್ಚಾಗುವುದು. ಶಿಕ್ಷಣದ ಜೊತೆಗೆ ಬಿಡುವಿನ ವೇಳೆಯಲ್ಲಿ ಯಾವುದಾದರೂ ಒಂದು ಕಲೆಯನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.

ಸಂಗೀತ ಶಿಕ್ಷಕಿ ಸೀಮಾ ಕುಲಕರ್ಣಿ ಮಾತನಾಡಿ, ಸಂಗೀತದ ಮಹತ್ವ, ಅದನ್ನು ಯಾಕೆ ಕಲಿಯಬೇಕು, ಅದರಿಂದ ಮನುಷ್ಯನಿಗೆ ಏನು ಪ್ರಯೋಜನ ಎಂಬುದನ್ನು ವಿವರಗಾಗಿ ಮಕ್ಕಳಿಗೆ ತಿಳಿಸಿದರು. ಹಲವು ಹಾಡುಗಳನ್ನು ಹೇಳಿಕೊಟ್ಟರು.

ರಾಘವೇಂದ್ರ ಇನಾಮದಾರ, ರವೀಂದ್ರ ಬಡಿಗೇರ, ತೇಜಸ್ವಿನಿ, ಪಾವನಿ ಅತಿಥಿಗಳನ್ನು ಸತ್ಕರಿಸಿದರು. ಶಿಬಿರದ ನಿರ್ದೇಶಕ ವಿಶ್ವನಾಥ ಕುಲಕರ್ಣಿ ಸ್ವಾಗತಿಸಿದರು. ಗುರುರಾಜ ಕೌಜಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net