ಹುಬ್ಬಳ್ಳಿ: ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಭವಾನಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಹಯೋಗದೊಂದಿಗೆ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿ ಶ್ರೀ ಪಂ. ಆನಂದತೀರ್ಥಾಚಾರ್ ಪಗಡಾಲ್ ಇವರ ಆದೇಶದ ಮೇರೆಗೆ ಈ ವರ್ಷವೂ ವಸಂತ ಶಿಕ್ಷಣ ಶಿಬಿರ ಕಾರ್ಯಕ್ರಮವನ್ನು ಮೇ 22ರಿಂದ ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ.
ಭವಾನಿನಗರ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಿತ್ಯ ಸಂಜೆ 4ಕ್ಕೆ ಸಂಧ್ಯಾ ಶ್ರೀನಾಥ ಅವರು ಮೂರು ದಿನಗಳ ವರೆಗೆ ಸಂಗೀತ ಹೇಳಿ ಕೊಡುವವರು.
ಮೇ 24ರಂದು ಸಂಜೆ 6.-30ಕ್ಕೆ ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹ ನಾಯಕ ಇವರಿಂದ ದಾಸವಾಣಿ ನಂತರ ಸಮಾರೋಪ ಕಾರ್ಯಕ್ರಮ ಪಂ. ಆನಂದತೀರ್ಥ ಆಚಾರ್ಯ ಪಗಡಾಲ್ ಉಪಸ್ಥಿತಿಯಲ್ಲಿ ನೆರವೇರಲಿದೆ.
ಭಜನಾ ಮಂಡಳಿ, ಸದಸ್ಯರು, ಭಗವದ್ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಟಿಟಿಡಿ ಸಂಚಾಲಕ ಗೋಪಾಲ ಕುಲಕರ್ಣಿ ಮನವಿ ಮಾಡಿದ್ದಾರೆ.