ಡಾ.ಜನಾರ್ದನ ನಾಯ್ಕ್​ಗೆ ಸಂಗೀತ ಚಿಕಿತ್ಸೆ ಸರ್ಟಿಫಿಕೆಟ್​

Bdk_Music-theraphy
Published on

ಕುಂಬಳೆ: ಕಾಸರಗೋಡು ಜನರಲ್​ ಆಸ್ಪತ್ರೆಯ ತಜ್ಞ ವೈದ್ಯ ಡಾ.ಜನಾರ್ದನ ನಾಯ್ಕ್​ ಸಿ.ಎಚ್​. ಮಂಗಳೂರಿನ ಯೆನೆಪೋಯ ವೈದ್ಯಕಿಯ ಕಾಲೇಜಿನಿಂದ "ಸಂಗೀತ ಚಿಕಿತ್ಸೆ'ಯಲ್ಲಿ ಸರ್ಟಿಫಿಕೆಟ್​ ಪಡೆದಿದ್ದಾರೆ.

ಯೆನೆಪೋಯ ವೈದ್ಯಕಿಯ ಕಾಲೇಜಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ, ಜರ್ಮನಿಯ ಡಾ.ಕೋರ್ಡುಲಾ ಡಯಟ್ರಿಚ್​ ಅವರ ಸಮ್ಮುಖದಲ್ಲಿ ಯೆನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ರಘುವೀರ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು.

ಸಂಗೀತ ಚಿಕಿತ್ಸಾತ್ಮಕ ಪದ್ಧತಿಯ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ, ಪ್ರೊ.ಪ್ರಭಾ ಮೊದಲಾದವರು ಉಪಸ್ಥಿತರಿದ್ದರು. ಡಾ.ಜನಾರ್ದನ ಉತ್ತರ ಕೇರಳದಲ್ಲಿ, ಸಂಗೀತ ಚಿಕಿತ್ಸಾ ರಂಗದಲ್ಲಿ ಪ್ರಮಾಣಪತ್ರ ಪಡೆದ ಪ್ರಥಮ ವೈದ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net