ಭಾವನೆಗಳಿಗೆ ಶಕ್ತಿ ತುಂಬುವ ಸಂಗೀತ

18 Jaggu 2
ಬೆಳಗಾವಿ ಜೆಎನ್‌ಎಂಸಿ ಕನ್ವೆನ್ಷನ್ ಸೆಂಟರ್‌ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಕಾಹೆರ್‌ನ ಸಂಗೀತ ಶಾಲೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಕ್ಕಳೊಂದಿಗೆ ಡಾ.ನಿತಿನ್ ಗಂಗಾನೆ, ಡಾ.ರಾಜೇಂದ್ರ ಭಂಡಾನಕರ, ಡಾ.ರಾಜೇಶ ಪವಾರ, ಪಂಡಿತ ರಾಜಾರಾಮ ಅಂಬೆಡೇಕರ, ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸಂಗೀತಾ ಕುಲಕರ್ಣಿ, ಯಾದವೇಂದ್ರ ಪೂಜಾರಿ, ನಿತಿನ ಸುತಾರ, ಜಿತೇಂದ್ರ ಸಾಬಣ್ಣವರ, ರಾಹುಲ್ ಮೊದಲ್ಕರ, ದಿಶಾ ಹರಿಕಾಂತ, ಡಾ.ಸುಜಾತಾ ಇದ್ದರು.
Published on

ಬೆಳಗಾವಿ: ಸಂಗೀತ ಮನಸ್ಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿ ತುಂಬುತ್ತದೆ. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅಂತಹ ಸಂಗೀತವನ್ನು ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ (ಕಾಹೆರ್) ಉಪಕುಲಪತಿ ಡಾ.ನಿತಿನ್ ಗಂಗಾನೆ ಹೇಳಿದರು.

ಜೆಎನ್‌ಎಂಸಿ ಕನ್ವೆನ್ಷನ್ ಸೆಂಟರ್‌ನ ಡಾ.ಎಚ್.ಬಿ. ರಾಜಶೇಖರ ಸಭಾಂಗಣದಲ್ಲಿ ಕಾಹೆರ್ ಸಂಗೀತ ವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದಂತಹ ಲಲಿತ ಕಲೆಗಳ ಅಭಿರುಚಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರ ಆಯೋಜಿಸಿ ಉತ್ತೇಜಿಸುತ್ತಿದೆ ಎಂದರು.

ಕಣ್ಮನ ಸೆಳೆದ ಸಂಗೀತ: ಏ.1ರಿಂದ 17ರ ವರೆಗೆ ಸಂಗೀತ ಶಿಬಿರ ಆಯೋಜಿಸಲಾಗಿತ್ತು. 168 ಮಕ್ಕಳು ಪಾಲ್ಗೊಂಡಿದ್ದರು. ಶಾಸೀಯ ಸಂಗೀತ, ಭಾವಗೀತೆ ಹಾಡುಗಳು, ಭರತನಾಟ್ಯ, ಹಾರ್ಮೋನಿಯಂ, ತಬಲಾ ವಾದ್ಯ ಸಂಗೀತಗಳ ತರಬೇತಿ ನೀಡಲಾಯಿತು. ಮಕ್ಕಳು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು. ನಾಟ್ಯಮಯೂರರಾಗಿ ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿದರು. ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗ ಗೀತೆಗಳು, ದೇಶಭಕ್ತಿ ಗೀತೆಗಳನ್ನು ನುಡಿಸಿ ಮನಸೊರೆಗೊಳಿಸಿದರು.

ಸಂಗೀತ ಶಾಲೆಯ ಸಂಯೋಜಕ ಡಾ.ರಾಜೇಂದ್ರ ಭಂಡಾನಕರ, ಜೆಎನ್‌ಎಂಸಿ ಉಪಪಾಚಾರ್ಯ ಡಾ.ರಾಜೇಶ ಪವಾರ, ಸಂಗೀತ ಶಾಲೆ ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬೆಡೇಕರ, ಶಿಕ್ಷಕಿ ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸಂಗೀತಾ ಕುಲಕರ್ಣಿ, ಹಾರ್ಮೋನಿಯಂ ಶಿಕ್ಷಕ ಯಾದವೇಂದ್ರ ಪೂಜಾರಿ, ನಿತಿನ ಸುತಾರ, ತಬಲಾ ಶಿಕ್ಷಕ ಜಿತೇಂದ್ರ ಸಾಬಣ್ಣವರ, ರಾಹುಲ್ ಮೊದಲ್ಕರ, ನೃತ್ಯ ಶಿಕ್ಷಕಿ ದಿಶಾ ಹರಿಕಾಂತ ಇದ್ದರು. ಡಾ.ಸುಜಾತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net