ಸಂಗೀತ ಶಿಕ್ಷಕರ ಹುದ್ದೆ ಭರ್ತಿ ಮಾಡಿ

27mnv01
Published on

ಮಾನ್ವಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಳೆದ 10 ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕ ಮಾಡಿಲ್ಲ. ಇದರಿಂದಾಗಿ ಸಂಗೀತ ಪದವೀಧರರ ವಯೋಮಿತಿ ಮೀರಲಿದ್ದು, ಸರ್ಕಾರ ಶೀಘ್ರ ಸಂಗೀತ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಎಂದು ನವ ಕರ್ನಾಟಕ ಸಂಗೀತ ಪದವೀಧರರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಅಮರೇಶ ಸಾಲಿಮಠ ಒತ್ತಾಯಿಸಿದರು.

ಶಿಕ್ಷಣ ಸಚಿವಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ವಿರುಪಣ್ಣಗೆ ಗುರುವಾರ ಸಲ್ಲಿಸಿ ಮಾತನಾಡಿದರು. ಸಂಗೀತ ಶಿಕ್ಷಕರು ಉದ್ಯೋಗ ಭದ್ರತೆಯಿಲ್ಲದೆ ಅತಂಕದಲ್ಲಿದ್ದಾರೆ. ಪ್ರಾಥಮಿಕ ಹಾಗೂ ಫ್ರೌಡಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ವಸತಿ ನಿಲಯಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಹನುಮೇಶ ಭಜಂತ್ರಿ, ಮಲ್ಲಿಕಾರ್ಜುನಗೌಡ, ಬಸನಗೌಡ, ಸಂತೋಷಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net