

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನದಲ್ಲಿ ಶಿಕ್ಷಕರ ಪಾತ್ರ ಅನನ್ಯ: ಮೃತ್ಯುಂಜಯ ಮಠದ
ಗದಗ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣಬೇಕು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದಲ್ಲಿ ಶಿಕ್ಷಕರ ಪಾತ್ರ ಅನನ್ಯ ವಾಗಿದೆ ಎಂದು ತಬಲಾ ಉಪನ್ಯಾಸಕ ಮೃತ್ಯುಂಜಯ ಮಠ ಹೇಳಿದರು.
ಡಾ.ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ದಿನಾಚರಣೆ ಅಂಗವಾಗಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಶಿಕ್ಷಕರು ಸದಾ ವಿದ್ಯಾರ್ಥಿಗಳ ಹಿತ ಚಿಂತಿಕರಾಗಿರಬೇಕು ವಿದ್ಯಾರ್ಥಿಗಳ ಏಳಿಗೆಯೇ ಶಿಕ್ಷಕರ ಸಂತೋಷ ಎಂದು ತಿಳಿದು ಶಿಕ್ಷಕರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರಮಿಸಬೇಕೆಂದು ಅವರು ಹೇಳಿದರು.
ಪಂಡಿತ ಪಂಚಾಕ್ಷರ ಗವಾಯಿಗಳವರು, ಡಾ. ಪುಟ್ಟರಾಜ ಕವಿ ಗವಾಯಿಗಳವರು ಸಂಗೀತಕ್ಕಾಗಿ ಗದುಗಿನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಸಂಗೀತ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಶಾಲೆ ಕಾಲೇಜಿನ ಮೂಲಕ ಜರುಗುತ್ತಿರುವುದು ನಾಡಿನ ಸಂಗೀತಗಾರರಿಗೆ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ಈ ಸ್ಥಳ ಸ್ಪೂರ್ತಿದಾಯಕವಾಗಿದೆ ಎಂದು ಉಪನ್ಯಾಸಕ ಗಂಗಾಧರ ಹಿಡ್ಕಿಮಠ ಅವರು ಹೇಳಿದರು.
ಕ್ಯಾಲ್ ಉಪನ್ಯಾಸಕರಾದ ಮಹಾಲಕ್ಷ್ಮಿ ಹೆಗಡೆ, ವಾ ಆರ್ ಮೂಲಿಮನಿ, ಪಂಚಾಕ್ಷರಿ ಹಿಡ್ಕಿಮಠ , ಶರಣಪ್ಪ ಕಲ್ಬುರ್ಗಿ, ವಿರುಪಾಕ್ಷ ಪಟ್ಟದಕಲ್, ಸುಮತಿ ಮರಿಗೌಡರ, ಶೃತಿ ಪವನ್, ಪವಿತ್ರ, ವಾಣಿಶ್ರೀ ಎಚ್ರಳ್ಳಿ, ತಮ್ಮಣ್ಣ, ರೇವಣಸಿದ್ದಯ್ಯ, ನಾಗರಾಜ್ ಪುರಂಕರ್, ಮಂಜುನಾಥ್ ಎಮ್ಮಿ. ಎಸ್ ಡಿ ಕಾಡಣ್ಣವರ್, ಉಪಸ್ಥಿತರಿದ್ದರು.