

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿವೃತ್ತ ಮುಖ್ಯ ನಾಯಮೂರ್ತಿ ಡಾ. ವಿ.ಎಸ್. ಮಳಿಮಠ ಸ್ಮರಣಾರ್ಥ ನಗರದ ಬಸವ ಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲನಿ ನಿಡವಣಿ ಬಡಾವಣೆಯ ಸೌಹಾರ್ದ ಸಮುದಾಯ ಭವನದಲ್ಲಿ ನೆನಪಿನಂಗಳದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಾಹಿತಿ ರಂಜಾನ ದರ್ಗಾ, ಮಡಿವಾಳಪ್ಪ ಶಿರಿಯಣ್ಣವರ, ಡಾ. ಮೃತ್ಯುಂಜಯ ಶೆಟ್ಟರ, ಡಾ. ಎಸ್.ಬಿ. ಕೋಟೂರ ಅತಿಥಿಗಳಾಗಿ ಆಗಮಿಸುವರು. ನ್ಯಾಯವಾದಿ ಕೆ.ಬಿ. ನಾವಲಗಿಮಠ ಅಧ್ಯಕ್ಷತೆ ವಹಿಸುವರು. ಗಾಯಕರಾದ ಡಾ. ಅಶೋಕ ಹುಗ್ಗಣ್ಣವರ, ಡಾ. ಶ್ರೀಧರ ಕುಲಕರ್ಣಿ, ಡಾ. ಶಾರದಾ ಭಟ್ಟ, ವಿದುಷಿ ಸುಜಾತಾ ಗುರವ, ಕಾಶೀನಾಥ ಹಂದ್ರಾಳ, ಶೃತಿ ಕುಲಕರ್ಣಿ, ಇತರರು ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.