ಸಂಗೀತ ಕಾರ್ಯಕ್ರಮ ಇಂದು

23 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಾಯಕ ಮೊಹ್ಮದ್​ ರಫಿ 100ನೇ ಜನ್ಮದಿನ ನಿಮಿತ್ತ ನಗರದ ಗಿರಿರಂಗ ಪ್ರತಿಷ್ಠಾನ ವತಿಯಿಂದ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಿ. 24ರಂದು ಸಂಜೆ 5 ಗಂಟೆಗೆ 100 ಬಾರ ಜನಂ ಲೆಂಗೆ ಸಂಗೀತ ಕಾರ್ಯಕ್ರಮ ಆರೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ದಾನಪ್ಪ ಕಬ್ಬೇರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಮಾರಂಭವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಉಪ ಮಹಾಪೌರ ದೀಪಕ ಚಿಂಚೋರೆ, ಪಾಲಿಕೆ ವಿಪಕ್ಷ ಮಾಜಿ ನಾಯಕ ಸುಭಾಷ ಶಿಂಧೆ ಆಗಮಿಸಲಿದ್ದಾರೆ. ದಾನಪ್ಪ ಕಬ್ಬೇರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೊಲ್ಹಾಪುರದ ಝೇಂಕಾರ ಬೀಟ್ಸ್​ ಸಂಗೀತ ಸಂಯೋಜನೆಯಲ್ಲಿ ನಗರದ ಗಾಯಕರಾದ ಇಬ್ರಾಹಿಂ ಖೋಜೆ, ಎಸ್​.ಎಂ. ರೋಣ, ಶಂಕರ ಪುರೋಹಿತ, ಮಹಮದ್​ ರಫೀಕ್​ ಇತರರು ಗಾಯನ ಪ್ರಸ್ತುತಪಡಿಸಲಿದ್ದಾರೆ. ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ವರ್ಷ 100ನೇ ವರ್ಷದ ಜನ್ಮದಿನ ಇರುವುದು ವಿಶೇಷವಾಗಿದೆ. ಇದೇ ಸಂದರ್ಭದಲ್ಲಿ ಗಾಯಕ ಇಬ್ರಾಹಿಂ ಖೋಜೆ ಅವರಿಗೆ ಸನ್ಮಾನಿಸಲಾಗುವುದು ಎಂದರು.

ಇಬ್ರಾಹಿಂ ಖೋಜೆ, ಎಸ್​.ಎಂ. ರೋಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net