ಸಂಗೀತ ಕಾರ್ಯಕ್ರಮ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಂ.ನಾರಾಯಣರಾವ ಮುಜುಂದಾರ ಅವರ 25ನೇ ಹಾಗೂ ಅವರ ಪುತ್ರ ಪಂ.ಸುಧೀಂದ್ರ ಮುಜುಂದಾರರ 14ನೇ ಪುಣ್ಯಸ್ಮರಣೆ ನಿಮಿತ್ತ ನ. 17ರಂದು ಸಂಜೆ 5.30ಕ್ಕೆ ಇಲ್ಲಿನ ಸಾಹಿತ್ಯ ಸಭಾ ಭವನದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪಂ.ನಾರಾಯಣರಾವ ಸ್ಮೃತಿ ಸಭಾ, ಜಿ.ಬಿ. ಮೆಮೋರಿಯಲ್​ ಟ್ರಸ್ಟ್​ ಸಹಯೋಗದಲ್ಲಿ ಏರ್ಪಡಿಸಿರುವ ಸಮಾರಂಭಕ್ಕೆ ಅತಿಥಿಯಾಗಿ ಡಾ. ಕೃಷ್ಣ ಕಟ್ಟಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮುಕ್ತಾ ಮುಜುಂದಾರ, ರಾಧಿಕಾ ಕಾಖಂಡಿಕಿ, ರಶ್ಮಿ ಕಾಖಂಡಿಕಿ, ಉಷಾ ಕುಲಕರ್ಣಿ, ವಿನಯ ಮುಜುಂದಾರ ಗಾಯನ ಪ್ರಸ್ತುತಪಡಿಸುವರು. ಶ್ರುತಿ ಅರ್ಚಕ ಮತ್ತು ನೂರಜಹಾನ ನದಾಫ ಸಿತಾರ್​ ಜುಗಲಬಂದಿ ನಡೆಯಲಿದೆ. ಸಹ ಕಲಾವಿದರಾಗಿ ತಬಲಾದಲ್ಲಿ ಶಾಂತಲಿಂಗ ಹೂಗಾರ, ನಿಸಾರ್​ ಅಹಮದ್​, ಜಯತೀರ್ಥ ಪಂಚಮುಖಿ, ಸುರೇಶ ನಿಡಗುಂದಿ ಸಾಥ್​ ನೀಡುವರು. ಸಂವಾದಿನಿಯಲ್ಲಿ ಪರುಶರಾಮ ಕಟ್ಟಿ ಸಂಗಾವಿ, ಕಿರಣ ಅಯಾಚಿತ ಸಾಥ್​ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net