

ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ 33ನೇ ಪೀಠಾರೋಹಣ ಸಮಾರಂಭದ ಸವಿನೆನಪಿಗಾಗಿ ರಾಗಮಿತ್ರ ಪ್ರತಿಷ್ಠಾನದಿಂದ ಗುರು ಗೌರವಾರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮಗಳನ್ನು ನಗರದ ಯೋಗ ಮಂದಿರದಲ್ಲಿ ಪ್ರತಿ ತಿಂಗಳ ಸೋಮವಾರ ಸಂಜೆ 6 ರಿಂದ ಎರಡು ಗಂಟೆ ಕಾಲ ನಡೆಸಲು ತೀರ್ವನಿಸಲಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಪ್ರಕಾಶ ಹೆಗಡೆ ಯಡಹಳ್ಳಿ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಆ. 1ರಂದು ಸಂಜೆ 6ಕ್ಕೆ ಸರಣಿ ಕಾರ್ಯಕ್ರಮವನ್ನು ಲಯನ್ಸ್ ಅಧ್ಯಕ್ಷ ಅಶೋಕ ಹೆಗಡೆ ಉದ್ಘಾಟಿಸುವರು. ಅತಿಥಿಗಳಾಗಿ ವೇದಮೂರ್ತಿ ಶ್ರೀಕೃಷ್ಣ ಭಟ್ ನೆಲಮಾವು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಸಂಗೀತಗಾರ ಸಂಜೀವ ಪೋತದಾರ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್. ಹೆಗಡೆ ಮಾಳೆನಳ್ಳಿ ಪಾಲ್ಗೊಳ್ಳುವರು.
ಸಂಗೀತಾಭಿಮಾನಿ ರಘುಪತಿ ಭಟ್ ಸುಗಾವಿ ಅಧ್ಯಕ್ಷತೆ ವಹಿಸಿಸುವರು. ಹಿರಿಯ ಸಂಗೀತ ಕಲಾವಿದ ಪಂ. ಆರ್.ವಿ. ಹೆಗಡೆ ಅವರಿಗೆ ಗೌರವ ಸಮ್ಮಾನ ಹಮ್ಮಿಕೊಳ್ಳಲಾಗಿದೆ. ಬಳಿಕ ವಿಭಾ ಹೆಗಡೆ ಯಲ್ಲಾಪುರ ಅವರಿಂದ ಗಾಯನ ಹಾಗೂ ಪಂ. ಹಳ್ಳದಕೈ ಅವರಿಂದ ಸಿತಾರ್ ವಾದನ ನಡೆಯಲಿದೆ.
ಸೆ. 4ರಂದು ಕುಮಾರ ರೂಪಕ್ ವೈದ್ಯ ತಬಲಾ ಸೋಲೋ, ವಿದ್ವಾನ್ ದತ್ತಾತ್ರೇಯ ವೇಲನಕರ್ ಅವರಿಂದ ಗಾಯನ, ಅಕ್ಟೋಬರ್ 2ರಂದು ವಿದ್ವಾನ್ ಭಾರ್ಗವರಾವ್ ಅವರಿಂದ ಕೊಳಲು, ಮೇಧಾ ಭಟ್ ಅವರಿಂದ ಗಾಯನ ನಡೆಯಲಿದೆ.
ನವೆಂಬರ್ 6ರಂದು ಶ್ರೀರಂಜಿನಿ ಅವರಿಂದ ಗಾಯನ, ವಿದುಷಿ ವಸುಧಾ ಶರ್ಮ ಅವರಿಂದ ಗಾಯನ. ಡಿ. 4ರಂದು ಕುಮಾರ ಅಜೇಯ ಹೆಗಡೆ ಹಾಮೋನಿಯಂ ಸೋಲೋ, ವಿದುಷಿ ರೇಖಾ ಭಟ್ ಕೋಟೆಮನೆ ಅವರಿಂದ ಗಾಯನ ನಡೆಯಲಿದೆ.
2024ರ ಜನವರಿ 1ರಂದು ವೇಣುಗೋಪಾಲ, ವಿದ್ವಾನ್ ಅಭಿಜಿತ್ ಶಣೈ ಗಾಯನ, ಫೆಬ್ರವರಿ 5ಕ್ಕೆ ಭರತ್ ಹೆಗಡೆ ಅವರಿಂದ ಹಾಮೋನಿಯಂ ಸೋಲೋ, ರೇಖಾ ದಿನೇಶ ಅವರಿಂದ ಗಾಯನ, ಮಾ. 4ರಂದು ಪ್ರಾರ್ಥನಾ ಹೆಗಡೆ, ವಿದ್ವಾನ್ ಶ್ರೀಧರ ಹೆಗಡೆ ಗಾಯನ ಮಾಡುವರು.
ಏ. 1ರಂದು ಅಂಜನಾ ಹೆಗಡೆ ಹಾಮೋನಿಯಂ ಸೋಲೋ, ಸ್ಮಿತಾ ಹೆಗಡೆ ಅವರಿಂದ ಗಾಯನ. ಮೇ 6ರಂದು ಶಾರದಾ ರಾವ್, ಸುಪ್ರಿಯಾ ಹಿತ್ಲಳ್ಳಿ ಗಾಯನ, ಜೂ. 3ಕ್ಕೆ ಸಮರ್ಥ ಹೆಗಡೆ ಕೊಳಲು, ವಿಘ್ನೕಶ್ವರ ಭಟ್ಟ ಗಾಯನ. ಜುಲೈ 1ರಂದು ಸ್ನೇಹಾ ಅಮ್ಮಿನಳ್ಳಿ ಗಾಯನ, ನಾಗರಾಜ ಹೆಗಡೆ ಶಿರನಾಳ ಕೊಳಲು ವಾದನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.