ಧಾರವಾಡ: ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಧಾರವಾಡ ಆಕಾಶವಾಣಿಯು ಭಾರತೀಯ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತ ಸಂಜೆಯನ್ನು ನಗರದ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಸೃಜನಾ ರಂಗಮAದಿರದಲ್ಲಿ ಮಾ. ೯ರಂದು ಸಂಜೆ ೬ಕ್ಕೆ ಏರ್ಪಡಿಸಿದೆ.
ತಾನಸೇನ್ ಸಮ್ಮಾನ್ ಪುರಸ್ಕೃತ ಗಾಯಕ ಗಣಪತಿ ಭಟ್ ಹಾಸಣಗಿ ಅವರಿಂದ ಶಾಸ್ತಿçÃಯ ಗಾಯನ, ಹೆಸರಾಂತ ಸಿತಾರ ವಾದಕ ಉಸ್ತಾದ್ ಛೋಟೆ ರಹಿಮತ್ ಖಾನ್ ಹಾಗೂ ಸರ್ಫರಾಜ್ ಖಾನ್ ಅವರ ಸಿತಾರ- ಸಾರಂಗಿ ಜುಗಲಬಂದಿ ನಡೆಯಲಿದೆ. ರಾಜೇಂದ್ರ ನಾಕೋಡ, ನಿಸಾರ್ ಅಹಮದ್ ತಬಲಾ ಸಾಥ್ ನೀಡುವರು. ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.