ಸಂಗೀತ ಕಾರ್ಯಕ್ರಮ 4ರಂದು

2 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಿಶೋರ ಕುಮಾರ ಜನ್ಮದಿನ ನಿಮಿತ್ತ ನಗರದ ಎಂಕೆ ಸ್ಕ್ವೇರ್ ಪ್ರತಿಷ್ಠಾನ ವತಿಯಿಂದ ಆ. 4ರಂದು ಸಂಜೆ 5.30ಕ್ಕೆ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಯೋಜಕ ಸದಾನಂದ ಕುರಡಿಕೇರಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಶೋರಕುಮಾರ ಅವರ ಗಾಯನಗಳನ್ನು ಪ್ರಸ್ತುತಪಡಿಸುವ ಮೂಲಕವೇ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಇದಲ್ಲದೆ ಯವ ಡ್ಯಾನ್ಸ್​ ಅಕಾಡೆಮಿ ವಿದ್ಯಾರ್ಥಿಗಳು ನೃತ್ಯ ಪ್ರದಶಿರ್ಸಲಿದ್ದಾರೆ ಎಂದರು.
ಈ ಸಮಾರಂಭಕ್ಕೆ ನವನಗರ ಕ್ಯಾನ್ಸರ್​ ಆಸ್ಪತ್ರೆಯ ಡಾ. ಬಿ.ಆರ್​. ಪಾಟೀಲ ಹಾಗೂ ಡಾ. ಉಮೇಶ ಹಳ್ಳಿಕೇರಿ ಸಹ ಸಾಥ್​ ನೀಡಿದ್ದಾರೆ. ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಜತೆಗೆ ಸಂಗೀತ ರೋಗಕ್ಕೆ ಒಂದು ರೀತಿ ಮದ್ದಾಗಿದೆ. ಹೀಗಾಗಿ ಸಂಗೀತದ ಮೂಲಕ ಜನರಲ್ಲಿ ಕ್ಯಾನ್ಸರ್​ ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಆರ್​.ಎನ್​. ಪಾಟೀಲ, ಪ್ರತಿಕ ದೇಶಮಾನೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net