

ಹುಬ್ಬಳ್ಳಿ: ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ವತಿಯಿಂದ ವಿವಿಧ ಸಂಟನೆಗಳ ಪ್ರಾಯೋಜಕತ್ವದಲ್ಲಿ ಖ್ಯಾತ ಸಂಗೀತಗಾರರ ಸಿತಾರ್ ಜುಗಲಬಂಧಿ, ಅಭಂಗವಾಣಿ ಸಂಗೀತ ಸಂಜೆ ಕಾರ್ಯಕ್ರಮಯನ್ನು ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನ. 30ರಂದು ಸಂಜೆ 5ಕ್ಕೆ ಏರ್ಪಡಿಸಲಾಗಿದೆ.
ಹಿಂದುಸ್ತಾನಿ ಗಾಯಕ ಪಂ. ಜಯತೀರ್ಥ ಮೇವುಂಡಿ, ಸಿತಾರ್ ವಾದಕರಾದ ಉಸ್ತಾದ ರಫೀಕ್ ಖಾನ್, ಅಂಕುಶ ನಾಯಕ, ಪಖಾವಾಜ್ ವಿಘ್ನೇಶ ಕಾಮತ, ರೀದಂ ಇನ್ಸ್ಟುಮೆಂಟ್ ಸೂರ್ಯಕಾಂತ ಗೋಪಾಲ ಸುರ್ವೆ, ಹಾಮೋರ್ನಿಯಂ ನರೇಂದ್ರ ನಾಯಕ, ತಬಲಾ ವಾದಕರಾದ ಹೇಮಂತ ಜೋಶಿ, ರಾಜೇಶ ಭಾಗವತ್ ಅವರ ಸಂಗೀತ ಕಚೇರಿಗಳು ನಡೆಯಲಿವೆ.
ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸುವ ಉದ್ದೇಶದಿಂದ ವಿಜಯವಾಣಿ ವೇದಿಕೆ ಒದಗಿಸುತ್ತಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು.
ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋರ್ಟಸ್ ಮುಖ್ಯ ಪ್ರಾಯೋಜಕತ್ವದಲ್ಲಿ ಕೊರವಿ ಗ್ರೀನ್ ಸಿಟಿ, ಪಾಟೀಲ ಹಿಯರಿಂಗ್, ವೆಟಿರ್ಗೋ ಹಾಗೂ ಸ್ಪೀಚ್ ಸೆಂಟರ್, ಎಚ್ಸಿಜಿ ಸುಚಿರಾಯು ಹಾಸ್ಪಿಟಲ್, ಕ್ಯಾರಕೊಪ್ಪದ ಶ್ರೀ ಸನ್ನಿಧಿ (ದತ್ತ ತಾಯಿ) ಆಶ್ರಮ, ಸಾಯಿರಾಮ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲಾವಿದರ ಪರಿಚಯ:
ಪಂ. ಜಯತೀರ್ಥ ಮೇವುಂಡಿ ಅವರು ದೇಶದ ಯುವ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಕಿರಾಣಾ ರಾಣಾದ ದೋಯೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಮೇವುಂಡಿ ಅವರು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕರು. ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಸಂತವಾಣಿ, ದಾಸವಾಣಿ ಹಾಡುಗಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ "ಯಂಗ್ ಮೆಸ್ಟ್ರೊ', ಪಂಡಿತ್ ಜಸರಾಜ್ ಗೌರವ ಪುರಸ್ಕಾರ, ಪಂಡಿತ್ ಬಸವರಾಜ ರಾಜಗುರು ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಉಸ್ತಾದ್ ರಫೀಕ್ ಖಾನ್:
ಖ್ಯಾತ ಸಂಗೀತಜ್ಞರ ಕುಟುಂಬದಿಂದ ಬಂದಿರುವ ಪ್ರಖ್ಯಾತ ಸಿತಾರ್ ವಾದಕ ಉಸ್ತಾದ ರಫೀಕ್ ಖಾನ್, ತಂದೆಯ ಗರಡಿಯಲ್ಲಿ ಬೆಳೆದವರು. ತಮ್ಮದೇ ಆದ ವಿಶೇಷ ಸಂಗೀತ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಸಹೋದರ ಶಫೀಕ್ ಖಾನ್ ಜತೆಗೂಡಿ ಜುಗಲ್ ಬಂದಿ ಮಾಡುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಸುರಮಣಿ, ಪಂ. ಜಸರಾಜ್ ಪುರಸ್ಕಾರ ಸೇರಿ ಅನೇಕ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಆಲ್ ಇಂಡಿಯಾ ರೇಡಿಯೋದಿಂದ ಟಾಪ್ ಗ್ರೇಡ್ ಆರ್ಟಿಸ್ಟ ಕೀರ್ತಿಗೆ ಪಾತ್ರರಾಗಿದ್ದಾರೆ.
ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಹಾಗೂ ರ್ಮಾಮಿರ್ಂಗ್ ಆರ್ಟ್ಸ್ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂಕುಶ ನಾಯಕ: ಮಂಗಳೂರಿನ ಅಂಕುಶ ನಾಯಕ ಅವರು ಶಿಕ್ಷಣ ತಜ್ಞ ಪ್ರೊ. ನರೇಂದ್ರ ನಾಯಕ ಹಾಗೂ ಡಾ. ಉಷಾಪ್ರಭಾ ಅವರ ಪುತ್ರ. ಉಸ್ತಾದ್ ರಫೀಕ್ ಖಾನ್ ಅವರ ಬಳಿ ಸಣ್ಣ ವಯಸ್ಸಿನಲ್ಲಿಯೇ ಸಿತಾರ್ ಕಲಿಯಲು ಆರಂಭಿಸಿದರು. ವಿದ್ವಾನ್ ಕೆ.ಆರ್. ಕುಮಾರ ಅವರ ಬಳಿಯೂ ಟಂ ಮೆಸ್ಟ್ರೊ ಸಂಗೀತ ಅಭ್ಯಾಸ ಮಾಡಿದರು. ಸರೋದ ಆಟಿರ್ಸ್ಟ್ ಪಂ. ಬುದ್ಧದೇವ ದಾಸ ಗುಪ್ತಾ ಅವರ ಬಳಿಯೂ ತರಬೇತಿ ಪಡೆದರು. ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಮ್ಯೂಸಿಕ್ ಸ್ಪರ್ಧೆಯಲ್ಲಿ ಅಂಕುಶ ಪ್ರಥಮ ಬಹುಮಾನ ಪಡೆದಿದ್ದಾರೆ. ರೇಡಿಯೋ ಹಾಗೂ ದೂರದರ್ಶನದ ಕಲಾವಿದರು. ರವಿ ಕೊಪ್ಪಿಕರ, ಅವಿನಾಶ ಹೆಬ್ಬಾರ ಮೆಮೋರಿಯಲ್ ಯುವ ಪುರಸ್ಕಾರ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.