ಡಿಸೆಂಬರ್‌ 2 ರಂದು ಟ್ಯಾಗೋರ್‌ ತೀರದಲ್ಲಿ ಸಂಗೀತ ಸಂಜೆ

Karave Program
Published on

ಕಾರವಾರ: ಡಿಸೆಂಬರ್ 2 ರಂದು ಕಾರವಾರ ಮಯೂರವರ್ಮ ವೇದಿಕೆಯಲ್ಲಿ ಗಡಿಭಾಗದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಕರವೇ ನಾರಾಯಣ ಗೌಡ ಬಣದ ಅಧ್ಯಕ್ಷ ಭಾಸ್ಕರ ಪಟಗಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಜಾನಪದ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಉದ್ಘಾಟನಾ ಕಾರ್ಯಕ್ರಮದಲ್ಲಿರುವರು ಎಂದರು. ಸುಮಾರು 1 ಗಂಟೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇನ್ನು ಯಾರಾದರೂ ಕಲಾವಿದರು ಸಂಪರ್ಕಿಸಿದರೆ ನಾವು ಅವರಿಗೂ ಕಾರ್ಯಕ್ರಮ ನೀಡಲು ಸಿದ್ಧವಿದ್ದೇವೆ ಎಂದರು.

ಅಂದಿನ ಕಾರ್ಯಕ್ರಮದಲ್ಲಿನ ಕನ್ನಡ ಕೋಗಿಲೆ ಕಾಸಿಂ ಅಲಿ, ಸರಿಗಮಪದ ಸುರಕ್ಷಾ ದಾಸ್, ಮಿಮಿಕ್ರಿ ಗೋಪಿ, ಮಿಮಿಕ್ರಿಯ ಮಂಜು,‌ಸಿಂಚನಾ ಮೈಸೂರು, ಪಾಲ್ಗೊಳ್ಳುವರು ರಂಜಿಸುವರು ಎಂದರು.ಭಾಷೆ, ಸಂಸ್ಕೃತಿ, ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬುದು ನಮ್ಮ ಆದ್ಯತೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net