ಹುಬ್ಬಳ್ಳಿ: ಇಲ್ಲಿಯ ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ನಗರಕರ ಲೈಬ್ರರಿಯ ಆಟಿರ್ಸ್ಟ್ ಫೋರಂ ವತಿಯಿಂದ ಖ್ಯಾತ ಹಿಂದುಸ್ತಾನಿ ಗಾಯಕ ವಿಜಯಪುರದ ದರ್ಶನ ಮೆಳವಂಕಿ ಅವರಿಂದ ಅ. 29ರಂದು ಸಂಜೆ 6ಕ್ಕೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಸವರಾಜ ಹಿರೇಮಠ ತಬಲಾ, ಚಿದಂಬರ ಜೋಶಿ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ ಎಂದು ಗೌರವ ಕಾರ್ಯದರ್ಶಿ ನಾಗಪ್ರಸಾದ ಕುಂದಾಪುರ ತಿಳಿಸಿದ್ದಾರೆ.