ನೆನಹು ಸಂಗೀತ ಸಂಜೆ ೧೮ಕ್ಕೆ

13 Dwd 1 (Prof. Sadanand Kanavalli)
Published on

ಧಾರವಾಡ: ಸಾಹಿತಿ, ಸಂಗೀತ ವಿಮರ್ಶಕ, ಸಂಘಟಕ ಪ್ರೊ. ಸದಾನಂದ ಕನವಳ್ಳಿಯವರ ಸ್ಮರಣಾರ್ಥ ಅವರ ಆಪ್ತ ಬಳಗ ಸೆ. ೧೮ರಂದು ಸಂಜೆ ೫.೩೦ಕ್ಕೆ ನಗರದ ಸೃಜನಾ ರಂಗಮAದಿರದಲ್ಲಿ ಪುಣೆಯ ವಿದುಷಿ ರುಚಿರಾ ಕೇದಾರ ಹಾಗೂ ಮೈಸೂರಿನ ಯುವ ಗಾಯಕ ರಮೇಶ ಕೋಲಕುಂದ ಅವರ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ, ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಿದೆ. ಶ್ರೀಧರ ಮÁಂಡ್ರೆ, ಕೇಶವ ಜೋಶಿ ತಬಲಾ ಹಾಗೂ ಗುರುಪ್ರಸಾದ ಹೆಗಡೆ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net