ಶಿವರಾಂಪೇಟೆಯ ರಾಮಮಂದಿರದಲ್ಲಿ ಫೆ.24 ರಂದು ಸಂಗೀತ

Music _1
Published on

ಮೈಸೂರು: ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿವರಾಂಪೇಟೆಯ ರಾಮಮಂದಿರದಲ್ಲಿ ಫೆ.24 ರಂದು ಸಂಜೆ 6 ಗಂಟೆಗೆ ವಿದುಷಿ ಶ್ರೀಮಾತಾ ರಮಾನಂದ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಯಶಸ್ವಿ(ಪಿಟೀಲು), ವಿದ್ವಾನ್ ಕುಮಾರಸ್ವಾಮಿ (ಮೃದಂಗ) ಸಾಥ್ ನೀಡಲಿದ್ದಾರೆ.

ಕಾಕನಕೋಟೆ: ರಂಗಾಯಣದ ವನರಂಗದಲ್ಲಿ ಫೆ.18 ರಂದು ಸಂಜೆ 6.30ಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಚನೆಯ ‘ಕಾಕನಕೋಟೆ’ ನಾಟಕ ಪ್ರದರ್ಶನ ನಡೆಯಲಿದೆ. ಎಸ್.ರಾಮನಾಥ ಅವರ ನಿರ್ದೇಶನದಲ್ಲಿ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net