ಸಂಗೀತ, ಮೃದಂಗ ಕಾರ್ಯಾಗಾರ ಸಮಾರೋಪ

New Project (2)
Published on

ಬದಿಯಡ್ಕ: ಬಳ್ಳಪದವು ವೀಣಾವಾದಿನಿ ಸಂಗೀತ, ವೈದಿಕ-ತಾಂತ್ರಿಕ ವಿದ್ಯಾಪೀಠದ ವತಿಯಿಂದ ಸಂಗೀತ, ಮೃದಂಗ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ವೀಣಾವಾದಿನಿಯ ನಿರ್ದೇಶಕ ಯೋಗೀಶ ಶರ್ಮ ಬಳ್ಳಪದವು ಮಾರ್ಗದರ್ಶನ ನೀಡಿದರು. ಕಲಾವಿದರಾದ ಕೃಷ್ಣಕುಮಾರ್ ಚೇರ್ತಲ, ಕಲ್ಲೆಕುಳಂಗರ ಉಣ್ಣಿಕೃಷ್ಣನ್ ತರಬೇತಿ ನೀಡಿದರು. ಬೆಂಗಳೂರಿನ ಡಾ.ಪದ್ಮಶ್ರೀ ಯೋಗಾಭ್ಯಾಸ ನಡೆಸಿಕೊಟ್ಟರು.

ಕಲ್ಲೆಕುಳಂಗರ ಉಣ್ಣಿಕೃಷ್ಣನ್, ವಯಲಿನ್ ವಿದ್ವಾನ್ ಪ್ರಭಾಕರ ಕುಂಜಾರು, ಮೂಡುಬಿದಿರೆ ರಮಿತ್ ಕುಮಾರ್, ವಿಶ್ವಾಸ್ ಪದ್ಯಾರಬೆಟ್ಟು, ಯೋಗೀಶ ಶರ್ಮಾ ಉಪಸ್ಥಿತರಿದ್ದರು.

ತಂತ್ರಪೂಜಾ ಪಾಠ ಆರಂಭ: ವೀಣಾವಾದಿನಿಯಲ್ಲಿ ಒಂದು ತಿಂಗಳಿನಿಂದ ತಂತ್ರಪೂಜಾ ಪಾಠ ಆರಂಭವಾಗಿದೆ. ಅನಂತ ಭಟ್ ಚೂರಿಕ್ಕೋಡು, ಆದಿತ್ಯ, ರಾಧಾಕೃಷ್ಣ ಭಟ್ ಆಲಂಗಾರು ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net