

ಹನುಮಸಾಗರ: ಸಂಗೀತ ಮಾನಸಿಕ ಒತ್ತಡ ನಿವಾರಣೆ ಮಾಡುವ ಜತೆಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ನಿಸರ್ಗ ಸಂಗೀತ ಶಾಲೆ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.
ಇದನ್ನೂ ಓದಿ: ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಮುಖ್ಯ
ಪಟ್ಟಣದ ಶ್ರೀ ಕರಿಸಿದ್ಧೇಶ್ವರ ಮಂಗಲ ಭವನದಲ್ಲಿ ಪತ್ರಿ ಬಸವೇಶ್ವರ ಸೇವಾ ಸಮಿತಿ ಮತ್ತು ನಿಸರ್ಗ ಸಂಗೀತ ಶಾಲೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾಸವಾಣಿ ಹಾಗೂ ವಚನ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯರು ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿರುವುದರಿಂದ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿತ್ಯ ನಿಯಮಿತವಾಗಿ ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ ದೂರ ಆಗುತ್ತದೆ. ಮನುಷ್ಯನ ಅನೇಕ ನೋವನ್ನು ಮರೆಸುವ ಶಕ್ತಿ ಸಂಗೀತಕ್ಕೆ ಇದೆ ಎಂದರು.
ಖ್ಯಾತ ಸಂಗೀತಕಾರ ಪಂ.ಬಾಲಚಂದ್ರ ನಾಕೋಡ ದಾಸವಾಣಿಯನ್ನು ಬಾಲಕಲಾವಿದೆ ಸ್ಥಾಯಿ ರಾಘವೇಂದ್ರ ನಾಕೋಡ, ತಬಲಾ ರಾಘವೇಂದ್ರ ನಾಕೋಡ ಪ್ರಸ್ತುತಪಡಿಸಿದರು.
ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಕರಿಸಿದ್ಧಪ್ಪ ಕುಷ್ಟಗಿ, ಶ್ರೀಶೈಲ ಮೋಟಗಿ, ಶರಣಪ್ಪ ಹುಬ್ಬಳ್ಳಿ, ಆಸೀಪ್ ಡಾಲಾಯತ್, ಬಸವರಾಜ ಚಿನಿವಾಲರ, ಸೂಚಪ್ಪ ದೇವರಮನಿ, ವಿಶ್ವನಾಥ ಕನ್ನೂರ, ಮಲ್ಲಯ್ಯ ಕೋಮಾರಿ, ಈರಣ್ಣ ಹುನಗುಂಡಿ, ಮಹಾಂತಯ್ಯ ಕೋಮಾರಿ, ಸತೀಶ ಜಮಖಂಡಿಕರ, ಬಸವರಾಜ ದ್ಯಾವಣ್ಣನವರ, ರಾಮಚಂದ್ರ ಬಡಿಗೇರ, ಮಲ್ಲಯ್ಯ ಕೋಮಾರಿ ಇತರರಿದ್ದರು.