ಸಂಗೀತ ಶ್ರೇಷ್ಠ ಕಲೆ

31 vikram 1
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಲೆಗಳಲ್ಲಿ ಸಂಗೀತ ಕಲೆ ಶ್ರೇಷ್ಠ ಎಂಬ ಪ್ರತೀತಿ ಇದೆ. ಸಂಗೀತಕ್ಕೆ ತನ್ನದೇ ಆದ ಶಕ್ತಿ ಇದೆ. ಸಂಗೀತವು ಕೆಲವರಿಗಷ್ಟೇ ಒಲಿಯುವ ಮತ್ತು ಸಾಧಿಸುವಂತಹ ಮಹತ್ವದ ಕಲೆಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.

ಇಲ್ಲಿನ ಸಾಧನಕೇರಿಯ ಗುರುಕೃಪಾ ಸಭಾಂಗಣದಲ್ಲಿ ಪಂ. ಚಂದ್ರಶೇಖರ ಪುರಾಣಿಕಮಠ ಸಂಗೀತ ಸಭಾ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಆಕಾಶವಾಣಿ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ, ಪಂ. ಚಂದ್ರಶೇಖರ ಪುರಾಣಿಕಮಠ ಒಬ್ಬ ಹಿರಿಯ ಹಿಂದುಸ್ತಾನಿ ಗಾಯಕರಷ್ಟೇ ಆಗಿರದೆ, ತಮ್ಮ ನಯ, ವಿನಯ, ವಾತ್ಸಲ್ಯಗಳ ಅನುಕರಣೀಯ ನಡೆಯಿಂದ ಅಪಾರ ಶಿಷ್ಯರಿಗೆ ತರಬೇತಿ ನೀಡಿದ ಅಪರೂಪದ ಸಂಗೀತ ಶ್ರೇಷ್ಠರೆಂದು ಹೆಸರು ಮಾಡಿದವರು. ಅಂತಹ ಆದರ್ಶ ಸಂಗೀತ ಗುರುಗಳನ್ನು ನೆನಪಿಸುವ ಸಮಾರಂಭಗಳು ನಿರಂತರವಾಗಿ ನಡೆಯಲಿ ಎಂದರು.

ಪಂ. ಶಂಕರ ಕಬಾಡಿ ಅವರಿಗೆ ಸನ್ಮಾನಿಸಲಾಯಿತು. ಸ್ಮೃತಿ ಸಭಾ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ, ಡಾ. ಸೌಭಾಗ್ಯ ಕುಲಕರ್ಣಿ, ಮಂಜುನಾಥ ಹೆಗಡೆ, ಸಾತಲಿಂಗ ದೇಸಾಯಿ, ಎಸ್​.ಎನ್​. ಹೆಗಡೆ, ವೆಂಕಟೇಶ ಹಾವನೂರ, ಶಿವಯೋಗಿ ಪುರಾಣಿಕಮಠ, ಮಲ್ಲಿಕಾರ್ಜುನ ಸಿಂದಗಿ, ಅನಂತ ಥಿಟೆ, ಇತರರು ಇದ್ದರು.

ಎನ್​.ಟಿ. ಪರಾಂಜಪೆ ಸ್ವಾಗತಿಸಿದರು. ಅಶೋಕ ಜೋಶಿ ನಿರೂಪಿಸಿದರು. ಹೇಮಂತ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net