

ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದ ಕಮತ ತೋಟದ ಗಜಾನನ ಯುವಕ ಮಂಡಳಿ ಹಾಗೂ ವಿರೂಪಾಕ್ಷ ಮಾಮನಿ ಅಭಿಮಾನಿ ಬಳಗದ ಆಶ್ರಯದಲ್ಲಿ ಗಣೇಶ ಚತುರ್ಥಿ ನಿಮಿತ್ತ ಗುರುವಾರ ಎ. ಮಧು ಎಂಎಸ್ 41-ಬೆಸ್ಟ್ ಬೆಳಗಾವಿ ತಂಡದಿಂದ ಸಂಗೀತ ವೈಭವ ಕಾರ್ಯಕ್ರಮ ಜರುಗಿತು.
ಉದ್ಘಾಟಿಸಿ ಮಾತನಾಡಿದ ವಿರೂಪಾಕ್ಷ ಮಾಮನಿ, ಭಾರತದಲ್ಲಿ ಸಂಗೀತವು ಸಾಮಾಜಿಕ-ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗೂ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ ಎಂದು ಹೇಳಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಹಾಂತೇಶ ಗೋಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಗೌಡಪ್ಪ ಸವದತ್ತಿ, ಪಂಚನಗೌಡ ದ್ಯಾಮನಗೌಡ್ರ, ಅಜಿತಕುಮಾರ ದೇಸಾಯಿ, ಈರಣ್ಣ ಚಂದರಗಿ, ಪರ್ವತಗೌಡ ಪಾಟೀಲ, ಶ್ರೀಶೈಲ ಬಳಗೇರ ಇತರರಿದ್ದರು.