

ಬೆಳಗಾವಿ: ಸಂಗೀತ ಕೇಳುಗರಿಗೆಲ್ಲ ಸಂತೋಷ ನೀಡಿ ಒತ್ತಡ ನಿವಾ-ರಿ-ಸುತ್ತದೆ. ಸಂಗೀತ ಮಾನವನ ಅದ್ಭುತ ಸೃಷ್ಟಿ ಎಂದು ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ -ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಲಿಂಗಾಯತ ಮಹಿಳಾ ಸಮಾಜದಿಂದ ಸೋಮವಾರ ಆಯೋಜಿಸಿದ್ದ ನಾದ ಪಲ್ಲವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯಮಿ ಲಕ್ಷಿ$್ಮ ಬಗಲಿ, ಸುನೀತಾ ಪಾಟೀಲ, ರಶ್ಮಿ ಅಗಡಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಸಂಸ್ಥಾಪಕಿ ಶೈಲಜಾ ಬಿಂಗೆ, ಶೈಲಾ ಪಾಟೀಲ, ಆಶಾ ಪಾಟೀಲ, ಜ್ಯೋತಿ ಬದಾಮಿ, ಸುರೇಖಾ ಮಾನ್ವಿ, ವಿದ್ಯಾ ಗೌಡರ, ಶೋಭಾ ಪಾಟೀಲ, ಅನುರಾದಾ ಬಾಗಿ, ಶಾರದಾ ಪಾಟೀಲ, ರತ್ನಪ್ರಬಾ ಬೆಲ್ಲದ, ಜಯಶೀಲಾ ಬ್ಯಾಕೋಡ ಇತರರಿದ್ದರು.