ಆರ್ಟಿಸ್ಟ್ ಫೋರಂ ವಾರ್ಷಿಕೋತ್ಸವ,  ದಿಗ್ಗಜರಿಂದ ಸಂಗೀತೋತ್ಸವ

IMG_20241229_211936_769.jpg
Published on

ಹುಬ್ಬಳ್ಳಿ: ಇಲ್ಲಿಯ ನಗರಕರ ಲೈಬ್ರರಿಯ ಆರ್ಟಿಸ್ಟ್ ಫೋರಂನ 12ನೇ ವಾರ್ಷಿಕ ಸಂಗೀತೋತ್ಸವದ ಅಂಗವಾಗಿ ನಗರಕರ ಲೈಬ್ರರಿ ಸಭಾಂಗಣದಲ್ಲಿ ವಿವಿಧ ಕಲಾವಿದರು ಸಂಗೀತ ಕಚೇರಿ ನಡೆಸಿದರು.

ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿರಸಿಯ ವಿನಾಯಕ ಹೆಗಡೆ ಅವರ ಗಾಯನ ಶ್ರೋತೃಗಳನ್ನು ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಿತು. ತಬಲಾ ದಿಗ್ಗಜ ಪಂಡಿತ ರಘುನಾಥ ನಾಕೋಡ ಹಾಗೂ ಬಸವರಾಜ ಹಿರೇಮಠ ಹಾಮೋರ್ನಿಯಂ ಸಾಥ್, ಶೋಭಾ ಇರಕಲ್ ಮತ್ತು ಭಾಗ್ಯಶ್ರೀ ತಾನ್ಪೂರ ಸಾಥ್ ನೀಡಿದರು.

ಹಿರಿಯ ಹಿಂದೂಸ್ತಾನಿ ಗಾಯಕಿ ಬೆಂಗಳೂರಿನ ವಿದುಷಿ ಪದ್ಮಿನಿ ರಾವ್ ಅವರು ಪ್ರಸ್ತುತ ಪಡಿಸಿದ ಶ್ರೀರಾಗ ಪ್ರೇಕ್ಷಕರ ಮನ ತಣಿಸಿತು.

ಸಂಸ್ಥೆಯ ಚೇರ್ಮನ್ ವಿಕ್ರಮ ಶಿರೂರ, ಫೋರಂ ಕಾರ್ಯದರ್ಶಿ ಪಂಡಿತ ಅಶೋಕ ನಾಡಿಗೇರ, ಡಾ. ನಾಗಲಿಂಗ ಮುರಗಿ, ಶಿವಸ್ವಾಮಿ ಹಿರೇಮಠ, ಮನುಕುಮಾರ ಹಿರೇಮಠ, ವಿ.ಎಲ್. ಪಾಟೀಲ, ಸಿದ್ದು ತಟ್ಟಿಮನಿ, ವಾಸುದೇವ ಕಾರೇಕರ, ವೀಣಾ ಹಾನಗಲ್, ನಿತಿನ ಶಿರೂರ, ಈಶ್ವರಪ್ಪ, ಪರಶುರಾಮ ಭಜಂತ್ರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net