13ರಂದು ವಿಜಯವಾಣಿ ಸಂಗೀತ ಸಂಜೆ ಕಾರ್ಯಕ್ರಮ

20240411_124700.jpg
Published on


ಬೆಳಗಾವಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಏ.13ರ ಶನಿವಾರ ಸಂಜೆ 5 ಗಂಟೆಗೆ ಇಲ್ಲಿನ ನೆಹರು ನಗರದ ರಾಮದೇವ ಹೋಟೆಲ್ ಬಳಿಯ ಕನ್ನಡ ಭವನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದಿನ ಯುವಸಮುದಾಯದಲ್ಲಿ ಭಾರತೀಯ ಸಂಗೀತದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ಖ್ಯಾತ ಸಂಗೀತ ಕಲಾವಿದರು ಸಂಗೀತ ಸುಧೆ ಹರಿಸಲಿದ್ದಾರೆ.
ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಗಾಯನ ಹಾಗೂ ದಾಸವಾಣಿ ಕಾರ್ಯಕ್ರಮ ನೀಡಲಿದ್ದಾರೆ. ಇದಕ್ಕೂ ಮೊದಲು ಭರವಸೆಯ ಯುವ ಕಲಾವಿದ ಅಂಕುಶ್ ಎನ್.ನಾಯಕ್ ಸಿತಾರ್ ವಾದನ ಕಾರ್ಯಕ್ರಮ ನೀಡುವರು. ಖ್ಯಾತ ಯುವ ತಬ್ಲಾಪಟು ಯಶವಂತ ವೈಷ್ಣವ ತಬ್ಲಾ ಸಾಥ್ ನೀಡಲಿದ್ದಾರೆ. ನರೇಂದ್ರ ನಾಯಕ ಹಾರ್ಮೋನಿಯಂನಲ್ಲಿ, ಸುರ್ಯಕಾಂತ ಸುರ್ವೆ ರಿದಮ್ ವಾದ್ಯ ಹಾಗೂ ಶ್ರೀದತ್ತ ಪ್ರಭು ಪಖಾವಾಜ್ ಸಾಥ್ ನೀಡುವರು.
ಕೆಎಲ್‌ಇ ಸಂಸ್ಥೆ, ಜಂಬಗಿ ಪಿಯು ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿನ ಸಂಕಮ್ ಹೋಟೆಲ್ ಹಾಸ್ಪಿಟಾಲಿಟಿ ಸಹಯೋಗ ನೀಡುತ್ತಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 8884432328, 8884432355ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net