ಸಂಗೀತದಿಂದ ಆರೋಗ್ಯ ವೃದ್ಧಿಯಾಗುತ್ತದೆ ; ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ ಅಭಿಮತ

swara
Published on

ಬೆಂಗಳೂರು: ಸಂಗೀತ ಕೇವಲ ಮನರಂಜನೆಯನ್ನಷ್ಟೇ ನೀಡುವುದಿಲ್ಲ. ಬದಲಾಗಿ ಸಂಗೀತದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹಿರಿಯ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ ಅಭಿಪ್ರಾಯಿಸಿದ್ದಾರೆ.

ಸತೀಶ್ ಹಂಪಿಹೊಳಿ ಮ್ಯೂಸಿಕ್ ೌಂಡೇಶನ್ ಟ್ರಸ್ಟ್ ಮತ್ತು ತ್ಯಾಗರಾಜನಗರ ದತ್ತಾತ್ರೇಯ ದೇವಸ್ಥಾನ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಸರಸ್ವತಿ ಮತ್ತು ದತ್ತಾತ್ರೇಯ ಹಂಪಿಹೊಳಿ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಸ್ವರನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸಂಗೀತಕ್ಕೆ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ. ನಮ್ಮ ಪೂರ್ವಜರು ಸಂಗೀತ, ಸಾಹಿತ್ಯ ಇತ್ಯಾದಿ ಕಲೆಗಳಲ್ಲಿ ತೊಡಗಿಕೊಂಡಿದ್ದರು. ಇವುಗಳಿಂದ ಮನರಂಜನೆ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂಬುದು ನಮ್ಮ ಹಿರಿಯರಿಗೆ ಗೊತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ಯುವಜನಾಂಗ ಇಂತಹ ಸಂಗೀತದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ವಿದುಷಿ ಶುಭಾ ಧನಂಜಯ ಮಾತನಾಡಿ ಲಲಿತಕಲೆಗಳಿಂದ ಮನಸ್ಸು ಏಕಾಗ್ರಗೊಳ್ಳುತ್ತದೆ. ಸಾಧನೆ ಮಾಡಬೇಕೆಂದುಕೊಂಡವರು ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳಬೇಕಾದ್ದು ಮೊದಲ ಕೆಲಸ ಎಂದರು.

ಸಮಾರಂಭದಲ್ಲಿ ಕಥಕ್ ನೃತ್ಯ ಕಲಾವಿದೆ ವಿದುಷಿ ಪೂರ್ಣಾ ಆಚಾರ್ಯ, ಮ್ಯೂಸಿಕ್ ೌಂಡೇಶನ್ ಸಂಸ್ಥಾಪಕ ಪಂ.ಸತೀಶ ಹಂಪಿಹೊಳಿ, ದತ್ತಾತ್ರೇಯ ದೇವಸ್ಥಾನದ ಕಾರ್ಯದರ್ಶಿ ಶ್ರೀಪಾದ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಪ್ರಸಿದ್ಧ ಗಾಯಕ ಪಂ.ಕಾಶೀನಾಥ ಪತ್ತಾರ ಹಿಂದೂಸ್ಥಾನಿ ಗಾಯನ, ಭಕ್ತಿಸಂಗೀತ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net